ಇತ್ತೀಚಿನ ಸುದ್ದಿ
ಧರ್ಮಸ್ಥಳ ಸ್ವಸಹಾಯ ಸಂಘದಿಂದ ಮಸ್ಕಿ ಬಿಲ್ವಪತ್ರಿ ಬಸವೇಶ್ವರ ದೇವಸ್ಥಾನಕ್ಕೆ1.50 ಲಕ್ಷ ಸಹಾಯಧನ
16/07/2024, 20:21

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com
ಮಸ್ಕಿ ತಾಲ್ಲೂಕಿನ ಮೆದಕಿನಾಳ ವಲಯದ ಹೊಗರಣಾಳ ಕಾರ್ಯಕ್ಷೇತ್ರದ ಹತ್ತಿಗುಡ್ದ ಗ್ರಾಮದ ಬಿಲ್ವಪತ್ರಿ ಬಸವೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಿಂದ ಕೊಡಮಾಡಿದ 1.50 ಲಕ್ಷ ರೂ.ಗಳ ಡಿಡಿ ಅನ್ನು ಮಸ್ಕಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ಶಾಲಿನಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊತ್ತವನ್ನು ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಬಳಕೆ ಮಾಡುವಂತೆ ತಿಳಿಸಿದರು.
ದೇವಸ್ಥಾನದ ಅಧ್ಯಕ್ಷ ಕರಿಬಸನಗೌಡ, ಉಪಾಧ್ಯಕ್ಷರು ಹಾಗೂ ದೇವಸ್ಥಾನ ಸೇವಾ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾದ ಪ್ರಸನ್ನ, ಸೇವಾ ಪ್ರತಿನಿಧಿಯಾದ ಶಿವಬಸಮ್ಮ ಹಾಗೂ ಒಕ್ಕೂಟ ಪದಾಧಿಕಾರಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.