ಇತ್ತೀಚಿನ ಸುದ್ದಿ
ದಂಡ ಕಟ್ಟದ ವಾಹನ ಮಾಲೀಕರೆ ನಿಮಗೆ ಕಾದಿದೆ ಗ್ರಹಚಾರ!!: ಪೊಲೀಸರ ಎನ್ ಒಸಿ ಇಲ್ಲದಿದ್ದರೆ ಇನ್ಶೂರೆನ್ಸ್ ಗೆ ಬೀಳುತ್ತೆ ಕೊಕ್ಕೆ
08/12/2022, 21:08

ಬೆಂಗಳೂರು(reporterkarnataka.com): ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಮೇಲೆ ಕಾನೂನು ಅಸ್ತ್ರ. ಆರ್ ಟಿಓ ಮತ್ತು ಇನ್ಶೂರೆನ್ಸ್ ಕಂಪನಿಗಳ ಮೂಲಕ ದಂಡ ವಸೂಲಿಗೆ ಫ್ಲಾನ್ ಮಾಡಲಾಗುತ್ತಿದೆ.
ಪೊಲೀಸರು ವೈಟ್ ಮತ್ತು ಯೆಲ್ಲೋ ಬೋರ್ಡ್ ವಾಹನಗಳ ದಂಡ ವಸೂಲಿಗೆ ಮುಂದಾಗಿದ್ದಾರೆ. ದಂಡ ಬಾಕಿ ಉಳಿಸಿಕೊಂಡ ವೈಟ್ ಬೋರ್ಡ್ ವಾಹನಗಳ ಇನ್ಶೂರೆನ್ಸ್ ಗೆ ಬೀಳುತ್ತೆ ಕೊಕ್ಕೆ. ಪ್ರತಿ ವರ್ಷ ವಾಹನದ ಇನ್ಶೂರೆನ್ಸ್ ಗೆ ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್ ಓಸಿ ಕೊಡಬೇಕು. ಎನ್ ಓಸಿ ಕೊಡದಿದ್ದಲ್ಲಿ ಇನ್ಶೂರೆನ್ಸ್ ರಿನಿವಲ್ ಅಗದೇ ಇರುವಂತೆ ಮಾಡಲು ಫ್ಲಾನ್ ಮಾಡಲಾಗಿದ್ದು, ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.