ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಗ್ಗದ ಕೊರೊನಾ ಸೋಂಕು: ಇಂದು 15 ಮಂದಿ ಸಾವು; ಲಾಕ್ ಡೌನ್ ವಿಸ್ತರಣೆ ಸಾಧ್ಯತೆ
18/06/2021, 19:59
ಮಂಗಳೂರು(reporterkarnataka news)
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಹೇರಿದರೂ ಸೋಂಕಿನ ಅರ್ಭಟ ತಗ್ಗಿಲ್ಲ. ಇಂದು ಈ ಮಹಾಮಾರಿಗೆ 15 ಮಂದಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 1,024 ಕ್ಕೆ ಏರಿದೆ. ಜಿಲ್ಲೆಯ ಇಂದಿನ ಪಾಸಿಟಿವಿಟಿ ರೇಟ್ 10.07% ಆಗಿದೆ. ಜತೆಗೆ ಇಂದು 665 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 6,931ಆಕ್ವೀವ್ ಕೇಸ್ ಹಾಗೂ ಈವರೆಗೆ ಒಟ್ಟು 87,350 ಪಾಸಿಟಿವ್ ಕೇಸ್ ವರದಿಯಾಗಿದೆ.