ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ: ಅಶಕ್ತರ ನಿವಾಸಕ್ಕೆ ತೆರಳಿ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧಾರ; ವೆಬ್ ಸೈಟ್ dk.nic.in ನಲ್ಲಿ ನೊಂದಾಯಿಸಿಕೊಳ್ಳಿ
19/06/2021, 07:07
ಮಂಗಳೂರು(reporterkarnataka news):
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನೀಡಲ್ಪಡುವ ಉಚಿತ ಲಸಿಕಾ ಶಿಬಿರ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಅನಾರೋಗ್ಯಕ್ಕೀಡಾದವರಿಗೆ ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ಬಂದು ಲಸಿಕೆ ನೀಡಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ,ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆಮನೆಗೆ ಬಂದು ಲಸಿಕೆ ಹಾಕಲಿರುವರು.ಹೀಗಾಗಿ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ dk.nic.in ನಲ್ಲಿ ನೊಂದಾಯಿಸಲು ಕೋರಲಾಗಿದೆ. ನೊಂದಾವಣೆಯಾದ ಬಳಿಕ ದಿನ ನಿಗದಿಪಡಿಸಿ ಮನೆ ಮನೆಗೆ ಬಂದು ಲಸಿಕೆ ನೀಡಲಾಗುವುದು.
ಮನೆ ಮನೆ ಲಸಿಕಾ ವಾಹನಕ್ಕೆ ದಿನಾಂಕ 19-6-2021 ರಂದು ಬೆಳಿಗ್ಗೆ 9.30 ಕ್ಕೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಯುನಿವರ್ಸಿಟಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಗುವುದು.