ಇತ್ತೀಚಿನ ಸುದ್ದಿ
ದ.ಕ.: ವಿದ್ಯುತ್ ದರ ಏರಿಕೆ ವಿರುದ್ಧ ಚಿಮಿನಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ.
22/06/2021, 09:12
ಮಂಗಳೂರು(reporterkarnataka news); ರಾಜ್ಯ ಸರಕಾರ ಏರಿಕೆ ಮಾಡಿರುವ ವಿದ್ಯುತ್ ದರ ವಾಪಾಸ್ ಪಡೆಯಬೇಕು, ಲಾಕ್ ಡೌನ್ ಅವಧಿಯ ಮೂರು ತಿಂಗಳು ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದ್ದ ಗ್ರಾಮ, ಘಟಕ ಮಟ್ಟದ ಚಿಮಿನಿ, ದೊಂದಿ, ಲಾಟೀನು ಪ್ರದರ್ಶನ, ಪ್ರತಿಭಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯಿತು.
ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲದಲ್ಲೂ ಕಾರ್ಯಕರ್ತರು ಚಿಮಣಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ, ಮೆರವಣಿಗೆ ನಡೆಸಿ ಸರಕಾರದ ಗಮನ ಸೆಳೆದರು.
ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಜೀವನ್ ರಾಜ್, ಅಶ್ರಫ್ ಕೆ ಸಿ ರೋಡ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ನೌಷದ್ ಬೆಂಗ್ರೆ, ಚರಣ್ ಶೆಟ್ಟಿ ಪಂಜಿಮೊಗರು, ತುಳಸಿ ದಾಸ್ ವಿಟ್ಲ, ಸುನಿಲ್ ತೇವುಲ, ರಜಾಕ್ ಮುಡಿಪು ಮತ್ತಿತರ ನಾಯಕರು ವಿವಿಧೆಡೆಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.