8:00 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ದಾಸ ಶ್ರೇಷ್ಠ ಕನಕದಾಸ: ದಾಸ ಸಾಹಿತ್ಯದ ಧ್ರುವ ತಾರೆ; ಬದುಕು- ಬರಹ- ಚಿಂತನೆ; ಒಂದು ಸಂಕ್ಷಿಪ್ತ ವಿವರಣೆ

29/11/2023, 21:06

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕುಲ ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆ ನೀವೇನಾದರೂ ಬಲ್ಲಿರಾ? ಎಂದು 15ನೇ ಶತಮಾನದಲ್ಲೇ ಪ್ರಶ್ನಿಸಿದವರು ಕನಕದಾಸರು. ಆ ಮೂಲಕ ಜಾತಿ, ಮತ, ಪಂಥ ಎಂಬ ಬೇಧದ ಕುರಿತು ಸಮಾಜದಲ್ಲಿ ಚಿಂತನೆಯನ್ನು ಬಡಿದ ಎಬ್ಬಿಸಿ ದವರು.
ಕನ್ನಡ ದಾಸ ಸಾಹಿತ್ಯ ಅಂಗ್ರ ಪಂಕ್ತಿಯಲ್ಲಿ ಕನಕದಾಸರೂ ಒಬ್ಬರು. ತುಂಬಿ ಹರಿದ ಪರಿಪಕ್ವವಾದ ಜೀವ ಅನುಭವ, ವಿವೇಕ, ಸಮಚತ್ತತೆಯನ್ನು ಅವರ ದಾಸ ಸಾಹಿತ್ಯ ನೀಡುತ್ತದೆ. ಕನಕದಾಸರು ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ದಾಸ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ‌.ದಾಸ ಶ್ರೇಷ್ಠ ಕನಕದಾಸರು ಆಧ್ಯಾತ್ಮಕ ಲೋಕವೇ ಮಹತ್ವದ್ದು.
ಶ್ರೀ ತಿರುಪತಿ ವೆಂಕಟೇಶ್ವರ ಅನುಗ್ರಹದಿಂದ 1509 ಡಿಸೆಂಬರ್ 3ರಂದು ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗೆ ಜನಿಸಿದವರೇ ಕನಕದಾಸರು. ಈ ದಂಪತಿಗೆ ಬಹಳ ವರ್ಷ ಮಕ್ಕಳ ಭಾಗ್ಯ ಒದಗದ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೇಳುತ್ತಾರೆ.

48 ದಿವಸ ನಾರು ಬಟ್ಟೆ ಹುಟ್ಟು ತಿರುಪತಿಯಲ್ಲಿ ಸೇವೆ ಮಾಡುತ್ತಾರೆ. ಗಂಡು ಮಗುವಾದರೆ ಸೇವೆಗೆ ಒಪ್ಪಿಸುತ್ತೇನೆ ಎಂದು ಹರಕೆ ಹೊತ್ತು ಕೊಳ್ಳುತ್ತಾರೆ. ಇದರ ಫಲಶೃತಿಯಾಗಿ ಗಂಡು ಮಗು ಹುಟ್ಟುತ್ತದೆ. ಮಗುವಿಗೆ ತಿಮ್ಮಪ್ಪ ಎಂದು ನಾಮಕರಣ ಮಾಡಲಾಗುತ್ತದೆ. ಅಂದಿನ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಹತ್ತಿರವಿರುವ ಬಾಡ ಎಂಬ ಗ್ರಾಮ ವಿಜಯನಗರ ಸಾಮ್ರಾಜ್ಯದ ಮುಖ್ಯ ಪಟ್ಟಣವಾಗಿತ್ತು. ಇದರ ಮಾಂಡಾಲಿಕನೆ ತಿಮ್ಮಪ್ಪನ ತಂದೆ ಬೀರಪ್ಪ ನಾಯಕ. ಇವರೊಬ್ಬ ದಕ್ಷ ಪ್ರಾಮಾಣಿಕ ಸ್ವತಂತ್ರ ಆಡಳಿತಗಾರನಾಗಿದ್ದರು. ಕಾಲಕ್ರಮೇಣ ಈತನಿಗೆ ವಯಸ್ಸಾದ ಮೇಲೆ ತನ್ನ ಮಗನಾದ ತಿಮ್ಮಪ್ಪನಿಗೆ ಊರಿನ ಮಾಂಡಲಿಕವನ್ನು ಅಧಿಕಾರವನ್ನು ನೀಡಿದರು.
ಅಧಿಕಾರ ವಹಿಸಿಕೊಂಡ ತಿಮ್ಮಪ್ಪನು ತಿಮ್ಮಪ್ಪ ನಾಯಕನಾದನು. ತಿಮ್ಮಪ್ಪ ನಾಯಕನಾಗಿ ದಕ್ಷವಾಗಿ ಆಡಳಿತ ನಡೆಸುತ್ತಿದ್ದನು. ತಂದೆಯ ಮಾತಿನಂತೆ ಆಡಳಿತ ವಿಜಯನಗರ ಸಾಮ್ರಾಜ್ಯ ರಾಜರಿಂದ ಪ್ರಶಂಸೆಗೆ ಗುರಿಯಾಗುತ್ತದೆ. ಒಂದು ದಿನ ತನ್ನ ಗ್ರಾಮದ ನವೀಕರಣ ಸಲುವಾಗಿ ಭೂಮಿಯನ್ನು ಅಗತ್ತಿರುವಾಗ ತಿಮ್ಮಪ್ಪ ನಾಯಕರಿಗೆ ಭೂಮಿಯಿಂದ ಹೇರಳವಾದ ವಜ್ರ, ಧನ ಕನಕ ದೊರೆಯುತ್ತದೆ. ಅದನ್ನೆಲ್ಲ ಬಡಬಗ್ಗರಿಗೆ ಮತ್ತು ದೀನ ದಲಿತರಿಗೆ ಹಂಚಿ ಕಾಗಿ ನೆಲೆಯಲ್ಲಿ ಆದಿಕೇಶವ ದೇವಾಲಯ ಮತ್ತು ರಂಗನಾಥನ ದೇವಾಲಯಗಳನ್ನು ನಿರ್ಮಿಸುತ್ತಾರೆ. ಅಂದಿನಿಂದ ಕನಕ ನಾಯಕನಾದನು. ಕನಕ ವೈಭವವನ್ನು ತಾಳಲಾರದೆ ಹಲವಾರು ವೈರಿಗಳನ್ನು ವಿಜಯನಗರ ದೊರೆಗಳಲ್ಲಿ ದೂರ ನೀಡುತ್ತಾರೆ. ಅದೇ ಸಮಯದಲ್ಲಿ ಬಾಡ ಗ್ರಾಮದಲ್ಲಿ ಗಡಿ ಪ್ರದೇಶದ ದಂಗೆ ಏಳುತ್ತದೆ. ದಂಗೆ ಕೋರರು ಕನಕ ಮೇಲೆ ಬಂಡಿ ಎತ್ತುತ್ತಾರೆ. ಕನಕನ ಶೂರತನದಿಂದ ರಣರಂಗದಲ್ಲಿ ಹೋರಾಟ ಮಾಡುತ್ತಾರೆ. ಆಗ ಅವನ ತಲೆಗೆ ಜೋರಾಗಿ ಪೆಟ್ಟು ಬಿದ್ದು ಕಣ್ಣು ಮುಸಕಾಗುತ್ತದೆ. ದೂರದಲ್ಲಿ ಯಾರೋ ನಿಂತು ಆತನನ್ನು ಕರೆದಂತಾಗುತ್ತದೆ.
ಈ ಕೆಲಸ ನಿನ್ನದಲ್ಲ ನನ್ನ ಬಳಿ ಬಾ ಜನರ ಸೇವೆ ಮಾಡು ನನ್ನ ದಾಸ ನಾಗು ಜನರಿಗೆ ದಾರಿದೀಪವಾಗು ಎಂದು ತಿರುಪತಿ ತಿಮ್ಮಪ್ಪ ದೇವರು ದರ್ಶನ ಕೊಟ್ಟು ಕರೆದಂತಾಗುತ್ತದೆ. ಅಂದಿನಿಂದ ಕನಕ ರಾಜ್ಯ ವೈಭವ ಎಲ್ಲವನ್ನು ತ್ಯಜಿಸಿ ತಾನು ನಿರ್ಮಿಸಿದ ಆದಿಕೇಶವ ದೇವಾಲಯಕ್ಕೆ ಬಂದು ನಿಂತಾಗ ಹೃದಯ ತುಂಬಿದ ಕಂಠದಿಂದ ಕೇಶವನ ನೋಡಿ ಮಧುರವಾಗಿ ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು. ದೋಷ ರಾಶಿ ನಿವಾರಶಯ ಎಂದು ಆದಿ ಚೆನ್ನಕೇಶವ ಅಂಕಿತನಾಮದೊಂದಿಗೆ ಹಾಡನ್ನು ಹಾಡುತ್ತಾರೆ. ಅಂದಿನಿಂದ ಕನಕ ನಾಯಕನು ಹೋಗಿ ಕನಕದಾಸರಾಗುತ್ತಾರೆ.
ಅಂದಿನ ಕಾಲಘಟ್ಟದಲ್ಲಿ ಮೂಢನಂಬಿಕೆಗಳನ್ನು, ಟೊಳ್ಳು ಸಿದ್ದಾಂತವನ್ನು ಹಾಗೂ ಆಡಂಬರದ ಪುರೋಹಿತಶಾಹಿಯನ್ನು ವಿರೋಧಿಸುತ್ತಾರೆ.
ಸಾಮಾಜಿಕ ಬದಲಾವಣೆಗೆ
ಹೋರಾಟ ನಡೆಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು