ಇತ್ತೀಚಿನ ಸುದ್ದಿ
ಧಾರಾವಾಡ: ಡಾ ಸುರೇಶ ನೆಗಳಗುಳಿ ಅವರಿಗೆ ಕಥಾ ಚೇತನ ರಾಜ್ಯ ಪ್ರಶಸ್ತಿ ಪ್ರದಾನ
17/11/2023, 11:03

ಧಾರವಾಡ(reporterkarnataka.com): ಅಕ್ಷರ ದೀಪ ಫೌಂಡೇಶನ್ , ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಸಹಯೋಗದಲ್ಲಿ l ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಉತ್ಸವದಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ ಚಿಕಿತ್ಸಕ ,ಕ್ಷಾರ ತಜ್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರನ್ನು ಕಥಾ ಚೇತನ ರಾಜ್ಯ ಪ್ರಶಸ್ತಿ 2023 ನೀಡಿ ಗೌರವಿಸಲಾಯಿತು.
ಪ್ರವೀಣ್ ಕುಮಾರ್ ಕನ್ಯಾಳ ಮತ್ತು ಎಸ್. ಬಿ. ಕುಲಕರ್ಣಿ ಇವರ ಸಾರಥ್ಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ಧಾರವಾಡದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.