8:12 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ದಾನಿ ಮೈಕಲ್ ಡಿಸೋಜ ನಮ್ಮ ಸಮಾಜಕ್ಕೆ ಪ್ರೇರಣೆ: ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್

06/08/2023, 00:34

ಮಂಗಳೂರು(reporterkarnataka.com): ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ – ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜಾ ನಮ್ಮ ಸಮಾಜಕ್ಕೆ ಪ್ರೇರಣೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.
ಡಾ. ಸಲ್ಡಾನ್ಹಾ ಮಂಗಳೂರು ಧರ್ಮಕ್ಶೇತ್ರ ಕೆನರಾ ಒರ್ಗನೈಸೇಶನ್ ಫೊರ್ ಡೆವಲಪ್‌ಮೆಂಟ್ ಆಂಡ್ ಪೀಸ್ (ಸಿ.ಒ.ಡಿ.ಪಿ.) ಸಂಸ್ಥೆ, ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಿ ಮಾತನಾಡಿದರು. ಕಾರ್ಯಕ್ರಮಕ್ಕೆ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಬಿಸಿರುವ 77 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.


ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ| ವಂ| ವಲೇರಿಯನ್ ಡಿಸೊಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ” ಮೈಕಲ್ ಜತೆಗೆ ನನ್ನ ಒಡನಾಟ ಕಳೆದ 45 ವರ್ಷಗಳದ್ದು. ನನಗೆ ದೇವರು ಅಗತ್ಯ ಇರುವುದಕ್ಕೂ ಮಿಕ್ಕಿ ಕೊಟ್ಟಿರುವುದರಿಂದ, ಅದನ್ನು ಕಷ್ಟದಲ್ಲಿರುವವರ ಜತೆ ಹಂಚಿಕೊಳ್ಳಬೇಕಾದ್ದು ನನ್ನ ಧರ್ಮ. ಮೈಕಲ್ ರಂತಹ ಹತ್ತು ಜನರು ನಮ್ಮ ಸಮಾಜದಲ್ಲಿದ್ದರೂ ಇಂದು ಈ ಹಂತದ್ದಲ್ಲಿ ಬಡತನವಿರುತ್ತಿರಲಿಲ್ಲ” ಎಂದು ಶ್ಲಾಘಿಸಿದರು.
ಪ್ರಸಕ್ತ ವರ್ಷದಲ್ಲಿ ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಮೈಕಲ್ ಡಿ ಸೊಜಾ ಒಂದು ಕೋಟಿ ರುಪಾಯಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದಾರೆ, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಮ್ದು ಸಿ.ಒ.ಡಿ.ಪಿ. ನಿರ್ದೇಶಕ ವಂ| ವಿನ್ಸೆಂಟ್ ಡಿಸೊಜಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಕಲ್ ಡಿಸೊಜಾರವರ ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿಸಿಲ್ವ, ಕಾರ್ಯಕ್ರಮದ ಸಂಯೋಜಕರಾದ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷರಾದ ಜ್ಯೋ ಕುವೆಲ್ಹೊ, ವಂ| ಆಸ್ಟಿನ್ ಪೆರಿಸ್, ವಂ| ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು