ಇತ್ತೀಚಿನ ಸುದ್ದಿ
ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಸಾವು: ಮರದ ಕೊಂಬೆಯಲ್ಲೇ ನೇತಾಡಿದ ಮೃತದೇಹ
06/08/2023, 22:30

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮರದ ಕೊಂಬೆಯಲ್ಲೇ ಪ್ರಾಣಬಿಟ್ಟ ಘಟನೆ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ.
ಲೋಕಪ್ಪ ಗೌಡ (56) ಎಂಬವರು ಮರದ ಕೊಂಬೆ ಕಡಿಯಲು ಹೋದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ಬಪ್ಪಿದ ಲೋಕಪ್ಪ ಗೌಡ ಅವರ ಮೃತದೇಹ ಮರದ ಕೊಂಬೆಯಲ್ಲೇ ನೇತಾಡುತ್ತಿತ್ತು.
ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲಿದ್ದನ್ನು ಕಡಿಯಲು ಹೋಗಿ ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಬಾಳೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.