ಇತ್ತೀಚಿನ ಸುದ್ದಿ
ಸಿ.ಟಿ. ರವಿ ಎಲ್ಲ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಹುದಾ? ನಾವು ಅವರ ಕುರಿತು ಮಾತನಾಡಬಾರ್ದಾ?: ಕೆಪಿಸಿಸಿ ವಕ್ತಾರ ಲಕ್ಷ್ಮಣ್
17/08/2023, 19:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಿಜೆಪಿ ನಾಯಕ ಸಿ.ಟಿ.ರವಿ ಮಾತ್ರ ಎಲ್ಲಾ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಹುದು. ಆದರೆ ಅವರ ಬಗ್ಗೆ ನಿಜ ಹೇಳಿದ್ರೆ ಕೆಳಗಿಂದ ಮೇಲಕ್ಕೆ ಉರ್ದೋಗುತ್ತೆ ಎಂದು
ರವಿ ವಿರುದ್ಧ ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
2020ರಲ್ಲಿ ಸಿ.ಟಿ.ರವಿ ಎಲ್ಲೆಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆಂದು ಪ್ರಶ್ನಿಸಿದ್ದೆ.
ಸತ್ಯಹರಿಶ್ಚಂದ್ರನಂತೆ ಮಾತನಾಡ್ತೀರಾ, ನಿಮ್ಮ ಹಿನ್ನೆಲೆ ಏನೆಂದು ಪ್ರಶ್ನಿಸಿದ್ದೆ. ನೀವು ಬ್ಯುಸಿನಿಸ್ ಮ್ಯಾನ್, ಎಜುಕೇಶನಲಿಸ್ಟ್, ಇಂಡಸ್ಟ್ರಿಯಲಿಸ್ಟ್, ರಿಯಲ್ ಎಸ್ಟೇಟ್ ಏನೆಂದು ಜನರಿಗೆ ತಿಳಿಸಿ ಎಂದಿದ್ದೆ ಎಂದು ಲಕ್ಷ್ಮಣ್ ನುಡಿದರು.
ಜನ ಹೇಳ್ತಿದ್ದಾರೆ, ನೀವು ಲೂಟಿ ರವಿ ಎಂದು ಪ್ರಶ್ನೆ ಮಾಡಿದ್ದೆ.
ಸಿ.ಟಿ. ರವಿ ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಿದ್ರು, ಇಂದು ಬೇಲ್ ಆಗಿದೆ. ಇತರೆ ಬಿಜೆಪಿ ಮುಖಂಡರು ಕೂಡ ಬೆಂಗಳೂರು, ಮೈಸೂರಿನಲ್ಲಿ ಕೇಸ್ ದಾಖಲಿಸಿದ್ದಾರೆ.
ಬಿಜೆಪಿ, ಪ್ರಧಾನಿ ಮೋದಿ, ಸಿ.ಟಿ.ರವಿ ವಿರುದ್ಧ ಮಾತನಾಡಿದ್ರೆ ಕೇಸ್ ಹಾಕಿ, ಇಡಿ, ಸಿಬಿಐ, ಪೊಲೀಸ್ ಮೂಲಕ ಹೆದರಿಸಲು ಪ್ರಯತ್ನಿಸುತ್ತಾರೆ.
ಬಿಜೆಪಿಯವರ ಈ ಬೆದರಿಕೆಗೆ ನಾವು ಬೆದರುವ ವಂಶಸ್ಥರಲ್ಲ, ಕಾಂಗ್ರೆಸ್ ವಂಶಸ್ಥರು.
ನನ್ನ ಆರೋಪದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೂ ಮನವಿ ಮಾಡ್ತೇನೆ. ನ್ಯಾಯಧೀಶರ ಮೂಲಕ ನನ್ನ ಆರೋಪದ ತನಿಖೆ ಆಗಬೇಕೆಂದು ಒತ್ತಾಯಿಸುತ್ತೇನೆ. ನನ್ನ ಆರೋಪದ ಬಗ್ಗೆ ಸಿಐಡಿ ಮೂಲಕ ಸಮಗ್ರ ತನಿಖೆಯಾಗಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.