ಇತ್ತೀಚಿನ ಸುದ್ದಿ
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು ದಾಖಲು
17/10/2021, 20:30
ಉಡುಪಿ(reporterkarnataka.com): ಪೂರ್ವಾನುಮತಿ ಇಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿ ಅ.15ರಂದು ಉಡುಪಿಯಲ್ಲಿ ‘ದುರ್ಗಾ ದೌಡ್’ ಕಾರ್ಯಕ್ರಮ ಆಯೋಜಿಸಿದ ಉಡುಪಿ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂರ್ವಾನುಮತಿಯಿಲ್ಲದೆ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಮಹಾಕಾಳಿ ದೇವಸ್ಥಾನದವರೆಗೆ ಪಾದಯಾತ್ರೆ ಯನ್ನು ನಡೆಸಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಸರಕಾರ/ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಉಡುಪಿ ನಗರಸಭೆ ಪೌರಾಯುಕ್ತ ಹಾಗೂ ಕೋವಿಡ್ ನೋಡೆಲ್ ಅಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ. ಅದರಂತೆ ಹಿಂ.ಜಾ.ವೇದಿಕೆಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 188, 269 ಐಪಿಸಿ ಕಲಂ: 5(1), 5(4) ದ ಕರ್ನಾಟಕ ಅಪಿಡಮಿಕ್ ಡಿಸಿಸ್ ಆ್ಯಕ್ಟ್ 2020ರಂತೆ ಪ್ರಕರಣ ದಾಖಲಾಗಿದೆ














