ಇತ್ತೀಚಿನ ಸುದ್ದಿ
ಕೋವಿಡ್ ಕೇರ್ ಸೆಂಟರ್ ಗೆ ಮಸ್ಕಿ ನೂತನ ಶಾಸಕ ತುರುವಿಹಾಳ ಭೇಟಿ: ಊಟ, ನೀರಿನ ವ್ಯವಸ್ಥೆ ಸರಿಯಿಲ್ಲ ಎಂದ ಸೋಂಕಿತರು
28/05/2021, 08:22
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮಸ್ಕಿ ಮುದುಗಲ್ ರಸ್ತೆ ಪಕ್ಕದಲ್ಲಿರುವ ಸರಕಾರಿ ಮುರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿಸಿದ ಕೋವಿಡ್ ಕೇರ್ ಸೆಂಟರ್ ಗೆ ನೂತನ ಶಾಸಕ ಬಸನಗೌಡ ತುರುವಿಹಾಳ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು.
ಸೋಂಕಿತರಿಗೆ ಧೈರ್ಯ ತುಂಬಿದ ಅವರು ಗ್ರಾಮೀಣ ಪ್ರದೇಶದಲ್ಲಿ ಜನರು ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡ ಬೇಕು.ಮುಖಕ್ಕೆ ಮಾಸ್ಕ್ ಧರಿಸಿ ಸ್ಯಾನಿಟೈಸರ್ ನಿಂದ ತೊಳೆಯುತ್ತಾ ಜೀವ ಕಾಪಾಡಿಕೊಳ್ಳಬೇಕು ಎಂದರು.
ಕೋವಿಡ್ ಸೋಂಕಿತರು ಯಾವುದೇ ಕಾರಣಕ್ಕೆ ಧೈರ್ಯ ಕಳೆದುಕೊಳ್ಳಬಾರದು. ಭಯಪಡ ಬಾರದು. ಆಗ ಏನೂ ಆಗುವುದಿಲ್ಲ. ಹಾಗೆ ಕೋವಿಡ್ ಮುಕ್ತ ಮಾಡೋಣ ಎಂದು ಹೇಳಿದರು.
ಈ ವೇಳೆ ಸೋಂಕಿತರು, ನಮಗೆ ಇಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ. ನೀರಿನ ವ್ಯವಸ್ಥೆ ಸರಿಯಿಲ್ಲ.ಸ್ವಚ್ಛತೆ ಕೊರತೆ ಇದೆ. ಅಧಿಕಾರಿಗಳು ಸ್ಪಂದಿಸಿದ ಇದ್ದಲ್ಲಿ ಶಾಸಕರಾದ ನಿಮಗೆ ನಾವು ಕರೆ ಮಾಡುತ್ತೇವೆ ಎಂದು ಹೇಳಿದರು. ಆ ವೇಳೆ ಪುರಸಭೆ ಮುಖ್ಯಧಿಕಾರಿ ಹನುಮಂತಮ್ಮ ನಾಯಕ್ ಮಾತನಾಡಿ, ಕುಡಿಯುವ ನೀರು ಸ್ವಚ್ಛತೆ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಬಸವನಗೌಡ ತುರುವಿಹಾಳ ಮಾತನಾಡಿ ಕೊರೊನಾ ಸೋಂಕು ಕಳೆದ ಹಲವು ದಿನಗಳಿಂದ ಹೆಚ್ಚಾಗಿ ಪರಿಣಮಿಸಿದೆ. ಸೋಂಕಿತರು ಭಯಪಡಬೇಡಿ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್, ತಹಶೀಲ್ದಾರ್ ಬಲರಾಮ್ ಕಟ್ಟಿಮನಿ, ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾತೋಡ್,ಶ್ರೀಶೈಲಪ್ಪ ಬ್ಯಾಳಿ, ಪುರಸಭೆ ಮುಖ್ಯ ಅಧಿಕಾರಿ ಹನುಮಂತಮ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.