ಇತ್ತೀಚಿನ ಸುದ್ದಿ
ಕೊರೊನಾದ ಭಯಬಿಟ್ಟು ರೇಶನ್ ಅಂಗಡಿಯ ಮುಂದೆ ರಾಶಿ ಬಿದ್ದ ಮಸ್ಕಿ ಜನತೆ: ಸರಕಾರದ ಆದೇಶಕ್ಕೆ ಬೆಲೆಯೇ ಇಲ್ಲ !
26/05/2021, 15:29
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಅಂತರಗಂಗೆ
info.reporterkarnataka@gmail.com
ಮಸ್ಕಿಯಲ್ಲಿ ಇಂದು ಜನರು ಕೊರೊನಾ ಸೋಂಕನ್ನು ಮರೆತು ನ್ಯಾಯಬೆಲೆ ಅಂಗಡಿಯ ಮುಂದೆ ಯಾವುದೇ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೆಯೇ ಮುಗಿದ ಬಿದ್ದರು.
ರೇಶನ್ ಅಂಗಡಿ ತೆರೆಯುವ ಮುನ್ನವೇ ಜನರು ಕೊರೊನಾ ಸೋಂಕಿನ ಬಗ್ಗೆ ಭಯಬಿಟ್ಟು ಗುಂಪುಗೂಡಿದ್ದರು. ಸಾಮಾಜಿಕ ಅಂತರ ಮರೆತು ಒಬ್ಬರನ್ನೊಬ್ಬರು ಅಂಟಿಕೊಂಡು ನಿಂತಿರುವ
ದೃಶ್ಯ ಕಂಡು ಬಂತು. ನ್ಯಾಯಬೆಲೆ ಅಂಗಡಿಯವರು ಅವರನ್ನು ಕರೆಸುವುದಕ್ಕೆ ಮೊದಲೇ ಬಯೋಮೆಟ್ರಿಕ್ ಹಾಕುವ ಮುನ್ನ ಎಚ್ಚರಿಕೆ ನೀಡಬೇಕಾಗಿತ್ತು. ಆದರೆ ಅದು ಯಾವುದು ಕಾಣ್ತಾ ಇರಲಿಲ್ಲ. ಇದನ್ನು ಕಾಪಾಡುವಲ್ಲಿ ಮಸ್ಕಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.
ಕೊರೊನಾ ಬಗ್ಗೆ ತಾಂಡ ಜನರ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸರಕಾರದ ಆದೇಶ ಗಾಳಿಗೆ ತೂರಿ ಮನಬಂದಂತೆ ನಡೆಯುವ ದೃಶ್ಯ ಮಸ್ಕಿ ಪಟ್ಟಣದ ನ್ಯಾಯಬೆಲೆ ಅಂಗಡಿ ಮುಂದೆ ಕಂಡು ಬಂತು. ಇನ್ನು ಮುಂದಾದ ತಾಲೂಕಾಡಳಿತ ಕಠಿಣ ಲಾಕ್ ಡೌನ್ ಮಾಡಿದ್ದರೂ ಸಹ ಪ್ರಯೋಜನಕ್ಕೆ ಬಾರದ ಹಾಗೆ ಜನರು ನಡೆದುಕೊಳ್ಳುತ್ತಿದ್ದಾರೆ.