5:33 PM Friday11 - April 2025
ಬ್ರೇಕಿಂಗ್ ನ್ಯೂಸ್
ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್…

ಇತ್ತೀಚಿನ ಸುದ್ದಿ

ಕೊರೊನಾ ಸೋಂಕಿತರಿಗೆ ಮನರಂಜನೆ ನೀಡಲು ಕುಣಿದು ಕುಪ್ಪಳಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ! !

25/05/2021, 18:52

ಹರಿಹರ(reporterkarnataka news); ಇದೀಗ ವೀಡಿಯೊವೊಂದು ಸಖತ್ ವೈರಲ್ ಆಗುತ್ತಿದೆ. ಹಾಗೆಂತ ಇದೇನು ಪೋಲಿ ವೀಡಿಯೊ ಅಲ್ಲ, ಬದಲಿಗೆ ಏಕ್ ದಂ ಮನೋರಂಜನೆ ನೀಡುವ ಡ್ಯಾನ್ಸ್ ವೀಡಿಯೊ. ಹೊನ್ನಾಳಿ ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಮಾಡಿದ ಡ್ಯಾನ್ಸ್.

ರೇಣುಕಾಚಾರ್ಯ ಅವರದ್ದು ಸದಾ ಸುದ್ದಿಯಲ್ಲಿರುವ ವ್ಯಕ್ತಿತ್ವ. ಸದಾ ವಿವಾದವನ್ನು ಮೈಗೆ ಎಳೆಯುವ ವ್ಯಕ್ತಿ. ಇದೀಗ ಅವರು ಡ್ಯಾನ್ಸ್ ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ.

ಶಾಸಕರ ಡ್ಯಾನ್ಸ್ ಗೆ ಹೊನ್ನಾಳಿ ಕ್ಷೇತ್ರದ ಜನರು ಮನಸೋತಿದ್ದಾರೆ. ಇಂತಹ ಶಾಸಕರನ್ನು ಪಡೆದ ನಾವು ಪುಣ್ಯವಂತರು ಎಂದು ಕ್ಷೇತ್ರದ ಕೆಲವು ಮಂದಿ ರೇಣುಕಾಚಾರ್ಯ ಅವರನ್ನು ಹಾಡಿ ಹೊಗಳಿದ್ದಾರೆ.


ಸೋಂಕಿತರನ್ನು ಮನರಂಜಿಸಲು ಶಾಸಕ ರೇಣುಕಾ ಚಾರ್ಯ ‘ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು’ ಎಂಬ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಜನತೆ ಇನ್ನಷ್ಟು ಮಂದಿ ಶಾಸಕರ ಜತೆ ಹೆಜ್ಜೆ ಸೇರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು