ಇತ್ತೀಚಿನ ಸುದ್ದಿ
ಕೊರೊನಾ ಕಾಟದ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರ ಆಟ: ಯೋಗೀಶ್ವರ್ 420 ಎಂದು ರೇಣುಕಾಚಾರ್ಯ !!
27/05/2021, 19:10

ಹರಿಹರ(reporterkarnataka news): ಕೊರೊನಾ ಆರ್ಭಟದ ಮಧ್ಯೆ ರಾಜ್ಯ ಬಿಜೆಪಿಯೊಳಗಿನ ಭಿನ್ನಮತ ಮತ್ತೆ ತಾರಕಕ್ಕೇರುವ ಸೂಚನೆ ಕಂಡು ಬಂದಿದೆ. ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ದೆಹಲಿಗೆ ಹೋದ ಸಚಿವ ಸಿ.ಪಿ. ಯೋಗೀಶ್ವರ್ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಸಂಪುಟದ ಸಚಿವರುಗಳು ಒಂದೊಂದು ತರಹ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಯೋಗೀಶ್ವರ್ ಅವರನ್ನು ಏಕವಚನದಲ್ಲಿ ನಿಂದಿಸಿ 420 ಎಂದು ಜರೆದಿದ್ದಾರೆ
ಸಚಿವ ಸಿ.ಪಿ. ಯೋಗೇಶ್ವರ ಒಬ್ಬ 420, ಕಳ್ಳನಂತೆ ಕಾರ್ಯ ಮಾಡುತ್ತಿದ್ದಾನೆ. ಅವನಿಗೆ ಲೂಟಿ ಮಾಡುವ ಖಾತೆ ಬೇಕಂತೆ. ಹೀಗೆಲ್ಲ
ಬ್ಲಾಕ್ ಮೇಲ್ ಮಾಡಲು ಬಂದರೆ ನಾವು ಸುಮ್ಮನಿರಲ್ಲ. ಇಂಥವರಿಂದಲೇ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಯಡಿಯೂರಪ್ಪನವರು ಆತನನ್ನು
ಸಚಿವನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ಬಿಜೆಪಿ ಮೂರು ಭಾಗವಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಹೇಳಲು ಯೋಗೇಶ್ವರ್‌ಗೆ ಯಾವ ನೈತಿಕತೆಯೂ ಇಲ್ಲ. ಮೆಗಾಸಿಟಿ ಹಗರಣದಲ್ಲಿ ಕೂಡಲೇ ಆತನನ್ನು ಬಂಧಿಸಬೇಕು ಎಂದು ಗೃಹಸಚಿವ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದರು. ಮಂತ್ರಿ ಮಂಡಲದಿಂದ ವಜಾ ಮಾಡಲು ಕೂಡ ಆಗ್ರಹಿಸಿದರು.
ಯೋಗೇಶ್ವರ್ ಹಿಂಬಾಗಿಲಿನಿಂದ ವಿಧಾನಸೌಧ ಪ್ರವೇಶಿಸಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾನೆ.
ಕೊರೊನಾದಿಂದ ಜನರು ನೊಂದು, ಬೆಂದು ಹೋಗಿದ್ದಾರೆ. ಈ ಸಮಯದಲ್ಲಿ ದೆಹಲಿಗೇಕೆ ಹೋಗಬೇಕಿತ್ತು. ಯೋಗೇಶ್ವರ್ ದೆಹಲಿಯಲ್ಲಿ ಯಾವ ನಾಯಕ ರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಪೋಟೋ ತೆಗೆಸಿಕೊಂಡಿದ್ದಾನೆ. ಒಣ ರಾಜಕೀಯ ಬಿಟ್ಟು ಕ್ಷೇತ್ರದಲ್ಲಿ ಸಂಚರಿಸಿ ಕರೊನಾ ಜಾಗೃತಿ ಮಾಡಲಿ ಎಂದು ತಾಕೀತು ಮಾಡಿದರು.