ಇತ್ತೀಚಿನ ಸುದ್ದಿ
ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರದು: ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅಭಿಪ್ರಾಯ,
25/05/2021, 15:19
ನವದೆಹಲಿ(reporterkarnataka news): ಕೊರೊನಾದ ಮೂರನೇ ಅಲೆ ಬಗ್ಗೆ ದೇಶಾದ್ಯಂತ ಹಬ್ಬುತ್ತಿರುವ ತಲೆಬುಡ ಇಲ್ಲದ ಸುದ್ದಿಗೆ ಎಮ್ಸ್ ಬ್ರೇಕ್ ಹಾಕಿದೆ. ಮೂರನೇ ಅಲೆ
ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾದ 3ನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆ ಅಂತೇನಿಲ್ಲ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ ( ಐಎಪಿ) ಈ ಮುನ್ನ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ರಣದೀಪ್ ಗುಲೇರಿಯಾ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಕೊರೊನಾ ಸೋಂಕಿನ ಅಂಕಿ ಅಂಶಗಳನ್ನು ಅವಲೋಕಿಸಿದರೆ ಮಕ್ಕಳ ಮೇಲೆ ಪರಿಣಾಮ ಬೀರಿದ್ದು ತುಂಬಾ ಕಡಿಮೆ. ಒಂದು ವೇಳೆ ಕೊರೊನಾ ಬಂದರೂ ಹೆಚ್ಚು ಹಾನಿಯುಂಟು ಮಾಡಿಲ್ಲ. ಹೀಗಾಗಿ 3ನೇ ಅಲೆ ಮಕ್ಕಳ ಮೇಲೆ ಸವಾರಿ ಮಾಡುತ್ತದೆ ಅನ್ನೋ ಯಾವುದೇ ಸೂಚನೆ ಇಲ್ಲ ಅಂತಾ ಗುಲೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.