ಇತ್ತೀಚಿನ ಸುದ್ದಿ
ಕೊರೊನಾ ಸೋಂಕು ಪ್ರಮಾಣ ಯಾಕೆ ತಗ್ಗುತ್ತಿಲ್ಲ?: ಇಲ್ಲಿದೆ ಉತ್ತರ, ವಿಟ್ಲ ಲಸಿಕೆ ಕೇಂದ್ರದ ದೃಶ್ಯ ನೋಡಿ
05/06/2021, 19:15
ವಿಟ್ಲ(reporterkarnataka news): ಕೊರೊನಾ ಎರಡನೇ ಅಲೆಯ ಅರ್ಭಟ ಜಾಸ್ತಿಯಾಗುತ್ತಿದ್ದಂತೆ ಇತ್ತ ಲಸಿಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಬೆಳಗ್ಗೆ 6 ಗಂಟೆಗೆ ಲಸಿಕೆ ಕೇಂದ್ರ ಮುಂದೆ ಜನರ ದಟ್ಟಣೆ ಶುರುವಾಗುತ್ತದೆ. ಇಂತಹದ್ದೇ ಘಟನೆಯೊಂದಕ್ಕೆ ವಿಟ್ಲ ಇಂದು ಸಾಕ್ಷಿಯಾಯಿತು.
ಬಂಟ್ವಾಳ ತಾಲೂಕಿನ ವಿಟ್ಲ ಶಾಲೆಯೊಂದರಲ್ಲಿ ಇಂದು ಲಸಿಕೆ ವಿತರಣೆ ಕಾರ್ಯಕ್ರಮವಿತ್ತು. ಲಸಿಕೆ ಪಡೆಯುವ ಲಗುಬಗೆಯಿಂದ ಅಲ್ಲಿ ನಾಗರಿಕರ ದೊಡ್ಡ ಜಾತ್ರೆಯೇ ಏರ್ಪಟ್ಟಿತ್ತು. ಇದಕ್ಕೆ ಕಾರಣ ಸಾರ್ವಜನಿಕರಲ್ಲ, ಬದಲಿಗೆ ಸ್ಥಳೀಯಾಡಳಿತ ಮತ್ತು ಆರೋಗ್ಯ ಇಲಾಖೆಯ ವ್ಯವಸ್ಥೆ ಸರಿ ಇಲ್ಲದಿರುವುದು. ಈಗ ನಿನಗೆಲ್ಲ ಅರ್ಥ ವಾಗಹುದು ಸೋಂಕು ಪ್ರಮಾಣ ಯಾಕೆ ಇಳಿಮುಖವಾಗುತ್ತಿಲ್ಲ ಎಂದು.