ಇತ್ತೀಚಿನ ಸುದ್ದಿ
ಕೊರೊನಾದಿಂದ ಬಚಾವ್ ಆದ ಬಳಿಕ ಹದಿನಾಲ್ಕು ಬಾರಿ ಪ್ಲಾಸ್ಮಾ ದಾನ ಮಾಡಿದ ಅಜಯ್
13/05/2021, 15:28
ಮುಂಬಾಯಿ(Reporter Karnataka News)
ಪುಣೆಯ ಐವತ್ತು ವರ್ಷದ ವ್ಯಕ್ತಿಯೊಬ್ಬರು ಕಳೆದ ವರ್ಷ ಜುಲಾಯಿಂದ ಇಲ್ಲಿಯವರೆಗೆ ಬರೋಬ್ಬರಿ 14 ಬಾರಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು, ಪುಣೆಯ ಅಜಯ್ ಮುನೊಟ್ ಎನ್ನುವವರು ಕಳೆದ ವರ್ಷ ಕೊರೊನಾಗೆ ತುತ್ತಾಗಿದ್ದರು. ಬಳಿಕ ಗುಣಮುಖರಾಗಿದ್ದು, ಗುಣಮುಖರಾದ 28 ದಿನಗಳ ಬಳಿಕ ಪ್ಲಾಸ್ಮಾವನ್ನು ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಗೆ ದಾನ ಮಾಡಿದ್ದಾರೆ.
ಅಂದಿನಿಂದ ಇಂದಿನವರೆಗೆ ಒಟ್ಟು ಹದಿನಾಲ್ಕು ಬಾರಿ ಪ್ಲಾಸ್ಮಾ ದಾನ ಮಾಡಿದರೂ ಯಾವುದೇ ರೀತಿಯ ಸುಸ್ತು ಅಥವಾ ಆರೋಗ್ಯ ತೊಂದರೆ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ