6:06 PM Wednesday11 - February 2026
ಬ್ರೇಕಿಂಗ್ ನ್ಯೂಸ್
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಗೆ ಸೋಲುವ ಭೀತಿ ಎದುರಾಗಿದೆ; 20 ದಿನದೊಳಗೆ ಮುಖ್ಯಮಂತ್ರಿ ರಾಜೀನಾಮೆ: ಸಂಡೂರಿನಲ್ಲಿ ಯಡಿಯೂರಪ್ಪ

08/11/2024, 19:12

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಕಾಂಗ್ರೆಸ್ ಗೆ ಸೋಲುವ ಭೀತಿ ಬಂದಿದೆ.‌ ಮುಡಾ ಹಗರಣದಲ್ಲಿ ಸಿಎಂ ಸಿಲುಕಿ ಒದ್ದಾಡ್ತಿದ್ದಾರೆ. 15-20 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.
ಶುಕ್ರವಾರ ಸಂಡೂರಿನ ಚೋರನೂರು‌ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಪ್ರಚಾರದ ವೇಳೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ, ನಾಳೆಯೂ ನಾನು ಸಂಡೂರಿನಲ್ಲೇ ಇರ್ತಿನಿ ಮೋದಿಯವರ ವರ್ಚಸ್ಸು ನಮಗೆ ಅನುಕೂಲವಾಗಲಿದೆ.ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ ಎಫ್ಐಆರ್ ಆಗಿದೆ, ಆಗಲಿ ಬಿಡಿ ಎದುರಿಸೋಣ ಎಂದರು.
ಮೂರು ವಿಧಾನ ಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಸಂಡೂರಿನಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದ್ದು, ಜನಾರ್ದನ ರೆಡ್ಡಿ- ಶ್ರೀರಾಮುಲು ಜೋಡಿ ಅಭ್ಯರ್ಥಿಗೆ ಹೆಚ್ಚು ಶಕ್ತಿ ನೀಡಿದೆ ಎಂದು ಹೇಳಿದರು.

ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ, ಸಿಎಂ ಸಿದ್ದರಾಮಯ್ಯ ‌ ಸೇರಿ, ಕ್ಯಾಬಿನೆಟ್ ಇಲ್ಲೇ ಇದೆ ಎಂಬ ವಿಚಾರ ಅದನ್ನು ನೀವೇ ಅರ್ಥ ಮಾಡಿಕೊಳ್ಳಿ. ಮುಡಾ ಹಗರಣ ಆರೋಪ ಸಾಬಿತಾಗ್ತದೆ ಅಂತ ಇಡಿ, ಸಿಬಿಐ ಮೇಲೆ ಸಿಎಂ ಸಿದ್ದರಾಮಯ್ಯ ಅಪಪ್ರಚಾರ ಮಾಡ್ತಿದಾರೆ. ಸಿಬಿಐ ಎಫ್ಐಆರ್ ಮಾಡಬೇಕು, ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ವಕ್ಪ್ ಬೋರ್ಡ್ ವಿಚಾರದಲ್ಲಿ ಜಂಟಿ ಸದನ ಸಮಿತಿ ತನ್ನ ಕೆಲಸ ಮಾಡ್ತಿದೆ ವಕ್ಪ್ , ಮುಡಾ ವಿಚಾರದಲ್ಲಿ ಅವರಿಗೆ ಆರೋಪ ಸಾಬಿತಾಗುತ್ತದೆ , ಅವರಿಗೆ ಭಯ ಶುರುವಾಗಿದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ವಿ.ಸುನೀಲ್ ಕುಮಾರ, ಭೈರತಿ ಬಸವರಾಜ, ಸತೀಶ ರೆಡ್ಡಿ, ಆಂಧ್ರ ಪ್ರದೇಶದ ಶಾಸಕರಾದ ಸುಧಾಕರ ರೆಡ್ಡಿ, ಮಾಜಿ ಶಾಸಕರಾದ ರೇಣುಕಾಚಾರ್ಯ, ತಿಪ್ಪೇಸ್ವಾಮಿ, ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಕೆ.ಎಸ್.ದಿವಾಕರ, ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕೌತಾಳ, ಹಿರಿಯರಾದ ಟಿ.ಕೃಷ್ಣಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು