ಇತ್ತೀಚಿನ ಸುದ್ದಿ
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಆರೋಪ; ತನ್ನನ್ನು ಯಾರೂ ಸಂಪರ್ಕಿಸಿಲ್ಲ: ಚಿಕ್ಕಮಗಳೂರು ಶಾಸಕ ತಿಮ್ಮಯ್ಯ ಸ್ಪಷ್ಟನೆ
18/11/2024, 20:37

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಆರೋಪ ಕುರಿತು
ಹೇಳಿಕೆಗೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ಶಾಸಕ ತಮ್ಮಯ್ಯ, ನನ್ನನ್ನು ಈವರೆಗೂ ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕ. ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ನೇತೃತ್ವದಲ್ಲಿ 5 ವರ್ಷ ಸರ್ಕಾರ ಆಳಲು ಜನ ಗೆಲ್ಲಿಸಿದ್ದಾರೆ. ಅವರು ಏನು ಮಾತಾಡಿದ್ದಾರೆ ನನಗೆ ಮಾಹಿತಿ ಇಲ್ಲ. ಇದರಲ್ಲಿ ನನ್ನ ಹೆಸರು ಏಕೆ ಬಂತು ನನಗೆ ಗೊತ್ತಿಲ್ಲ ಎಂದರು.
ಈವರೆಗೂ ನನ್ನನ್ನ ಯಾರೂ ಆ ರೀತಿ ಸಂಪರ್ಕ ಮಾಡಿಲ್ಲ. ನಾನು 18 ವರ್ಷ ಬಿಜೆಪಿಯಲ್ಲಿ ಇದ್ದೆ, ಬಿಜೆಪಿಯವರು ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡುತ್ತಾರೆ ಅಷ್ಟೇ. ಈ ರೀತಿ ಯಾರೂ ಸಂಪರ್ಕ ಮಾಡಿಲ್ಲ, ಅವರನ್ನೇ ಕೇಳಬೇಕು ಎಂದರು.