ಇತ್ತೀಚಿನ ಸುದ್ದಿ
ಗ್ಯಾಸ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ
20/03/2026, 19:30
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಟ್ರಂಪ್ ರವರ ತಮ್ಮನೆ ಮೋದಿ, ಮೋದಿ ಇಲ್ಲಿ ಮಾಡುತ್ತಿರುವುದನ್ನೇ ಟ್ರಂಪ್ ಅಲ್ಲಿ ಮಾಡುತ್ತಿರುವುದು. ಟ್ರಂಪ್ ಕಪ್ಪು ಇರುವವರನ್ನು ಹೊರಗೆ ಹಾಕುವ ಕೆಲಸ ಅಲ್ಲಿ ಮಾಡುತ್ತಿದ್ದಾರೆ. ಇಲ್ಲಿ ಮೋದಿ ಮಾಡುತ್ತಿರುವುದು ಸಹ ಅದನ್ನೇ. ಇಸ್ರೇಲ್ ನಲ್ಲಿ ಇರುವ ಜನಸಂಖ್ಯೆ ಕೇವಲ ಒಂದು ಕೋಟಿ, ಆದರೆ ಅವರು ಇಡೀ ಪ್ರಪಂಚಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಯುದ್ಧ ಪ್ರಾರಂಭಿಸಿದ್ದು ಅಮೆರಿಕದವರು ಇದನ್ನು ಅವರೇ ನಿಲ್ಲಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. ನಂತರ ಪ್ರತಿಭಟನೆಯಲ್ಲಿ ಮಾತನಾಡಿದರು.
ನಮ್ಮಲ್ಲಿದ್ದ ಗ್ಯಾಸ್ ಸ್ಟಾಕ್ ಗೆ ರೇಟ್ ಜಾಸ್ತಿ ಮಾಡಿದ್ದಾರೆ
ಈ ದೇಶದಲ್ಲಿ 5 ಲಕ್ಷ ಹೋಟೆಲ್ ಗಳು ಬಂದ್ ಆಗಿವೆ. ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷದವರಾ? ಅಥವಾ ಹೋಟೆಲ್ ಬಂದ್ ಮಾಡಿದವರೆಲ್ಲ ಕಾಂಗ್ರೆಸ್ ನವರಾ?
ಇವರು ಮಾಡಿದ ಅನಾಚಾರಕ್ಕೆ ಇನ್ನೂ ನಾಲ್ಕು ತಿಂಗಳಲ್ಲಿ ಎಲ್ಲಾ ಹೋಟೆಲ್ ಗಳನ್ನು ಬಂದು ಮಾಡಬೇಕಾಗುತ್ತದೆ .
ನನ್ನ ಪ್ರಕಾರ ಪ್ರೈ ಮಿನಿಸ್ಟರ್ ಆಫೀಸ್ ಅನ್ನು ಬಂದ್ ಮಾಡುವುದು ಉತ್ತಮ. ನನಗೆ ಆಡಳಿತ ಮಾಡಲು ಆಗುವುದಿಲ್ಲ ಎಂದು ಮೋದಿ ಹಿಂದಕ್ಕೆ ಸರಿಯಬೇಕು ಎಂದರು.
ಆದಿಪುರಾಣದಲ್ಲಿ ಪಂಪ ಈ ದೇಶವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಬರೆಯುತ್ತಾರೆ.
ಈ ಮುಟ್ಟಾಳರು ವೋಟು ಬರುತ್ತದೆ ಎಂದು ಸಾಬ್ರಿಗೆ, ಕ್ರಿಶ್ಚಿಯನರಿಗೆ ಬೈಯುತ್ತಾರೆ. ಈ ದೇಶ ಗಟ್ಟಿಯಾಗಿರುವುದು ಆರ್ ಎಸ್ ಎಸ್, ಬಿಜೆಪಿ, ಬಜರಂಗದಳದಿಂದ ಅಲ್ಲ.
ಎಲ್ಲರನ್ನು ಒಂದು ಮಾಡಲು ಗಾಂಧಿ, ಪಂಪ, ಬಸವಣ್ಣ ಹೋರಾಟ ಮಾಡಿದ್ದಾರೆ. ಇವರೇನು ಮಾಡಿದ್ದಾರೆ? ಎಲ್ಲ ಜಾತಿ ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಇವರು ಮಾಡುತ್ತಿದ್ದಾರೆಯೇ? ಪಾರ್ಲಿಮೆಂಟ್ ಇರುವುದು ಆಡಳಿತ ಪಕ್ಷದ ಪರವಾಗಿ ಮಾತನಾಡಲು ಇರುವುದಲ್ಲ ಎಂದು ಹೇಳಿದರು.
ನಮ್ಮ ಶಾಸಕರು ಸದನದಲ್ಲಿ ಮಾತನಾಡುವುದನ್ನು ನೋಡಿದರೆ ಈ ರೀತಿ ಶಾಸಕರು ಏನು ಒಳ್ಳೆಯವರಪ್ಪಾ ಎಂದುಕೊಳ್ಳಬೇಕು. ಜ್ಞಾನೇಂದ್ರರವರು ಮಾತನಾಡುವುದು ನೋಡಿದರೆ ಈ ಪ್ರಪಂಚದಲ್ಲಿ ಅವರಷ್ಟು ಧರ್ಮರಾಯರು ಯಾರು ಇಲ್ಲ ಎಂದು ಅಂದುಕೊಳ್ಳಬೇಕು. ಈಗ ಜ್ಞಾನೇಂದ್ರ ಏನು ಮಾಡುತ್ತಿದ್ದಾರೆ ಗೊತ್ತಿದೆಯೇ? ಅವರ ಮಗನ ಹೆಸರಿನಲ್ಲಿ ತೋಟ ಮಾಡಿದ್ದಾರೆ ಇದರ ಹಣ ಕಟ್ಟಿದ್ದು ಎಸಿಸಿ ಕೃಷ್ಣಮೂರ್ತಿ ರವರು. ಈಗ ಎನ್ ಎಚ್ ಅನ್ನು ಅವರ ತೋಟದ ಬಳಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಜ್ಞಾನೇಂದ್ರ ಅಂದರೆ ಈ ರೀತಿ ನಾನೇನಾದರೂ ಮಾಡಿದ್ದೇನೆಯೇ? ಜ್ಞಾನೇಂದ್ರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇವರು ಮರ್ಯಾದೆಯಿಂದ ಹೋಗಿ ಯುದ್ಧ ನಿಲ್ಲಿಸದಿದ್ದರೆ ಇನ್ನು ಎರಡು ತಿಂಗಳಲ್ಲಿ ಈ ದೇಶದಲ್ಲಿ ಕ್ರಾಂತಿಯಾಗುತ್ತದೆ
ಇದರಿಂದ ಎಷ್ಟು ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಇಳಿಯುತ್ತಾರೆ. ಎಷ್ಟೇ ಬೆಲೆ ಏರಿಕೆ ಆದರೂ ನಾವು ಮೋದಿಗೆ ವೋಟು ನೀಡುತ್ತೇವೆ ಎಂದವರು ಈಗ ಕೊಡಿ ನೋಡೋಣ. ಅವರ ಒಂದು ದಿನದ ಡ್ರೆಸ್ ಖರ್ಚು 10 ಲಕ್ಷ .ಅವರು ಫೇಶಿಯಲ್ ಮಾಡದೆ ಹೊರಗಡೆ ಬರುವುದಿಲ್ಲ
ರಾಷ್ಟ್ರಪತಿ ಬಂದಾಗ ಎದ್ದು ನಿಲ್ಲಬೇಕು ಎಂಬ ಗುಣ ಅವರಿಗೆ ಇಲ್ಲ. ಇದು ಅವರ ಸೊಕ್ಕು ತೋರಿಸುತ್ತದೆ. ನಮ್ಮ ಆಡಳಿತಕ್ಕೂ ಮೋದಿ ಅವರಿಗೂ ಎಷ್ಟು ಡಿಫರೆನ್ಸ್ ಇದೆ. ಎನ್ ಆರ್ ಇ ಜಿ ಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆಯುವಂತದ್ದು ಏನಿತ್ತು? ಇವತ್ತು ಸಿದ್ದರಾಮಯ್ಯ ಆಗಿರುವುದಕ್ಕೆ ನಾವು ಈ ಕರ್ನಾಟಕದಲ್ಲಿ ಇದ್ದೇವೆ ಎಂದರು.
ಆರ್. ಎಂ. ಮಂಜುನಾಥ್ ಗೌಡ ಮಾತನಾಡಿ, ಬೆಲೆ ಏರಿಕೆ ಜೊತೆಗೆ ಗ್ಯಾಸ್ ಕೂಡ ಏರಿಕೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆಯುತ್ತಲೇ ಇದ್ದಾರೆ ಆದರೂ ಕರ್ನಾಟಕದ ಮನವಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಕರ್ನಾಟಕಕ್ಕೆ ಮಾತ್ರ ಗುಜರಾತ್ ಅಥವಾ ಬೇರೆ ರಾಜ್ಯಗಳಿಗೆ ಇಲ್ಲ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ ಬಿಜೆಪಿಯ ಸರ್ಕಾರ ಇಂತಹ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಎನ್‌ಡಿಎ ಸರ್ಕಾರದಲ್ಲಿ ಮೋದಿಯವರು ಯಾವಾಗ ಅಧಿಕಾರ ವಹಿಸಿಕೊಂಡರು ಅಂದಿನಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಅತ್ಯಂತ ಹೆಚ್ಚು ಸಂಸದರು ನಮ್ಮ ಕರ್ನಾಟಕದಿಂದ ಹೋಗಿದ್ದಾರೆ. ಜನರ ಪರವಾಗಿ ಇರದೇ ಅವರ ಪರವಾಗಿ ಇರುವುದು ಒಂದು ಬೇಸರದ ಸಂಗತಿಯಾಗಿದೆ. ಮೋದಿಯವರ ಈ ನೀತಿಯನ್ನು ಪ್ರಬಲವಾಗಿ ಸಾಂಕೇತಿಕವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ಬಿಜೆಪಿಯ ಎಲ್ಲಾ ಸಂಸದರು ಮಾತನಾಡಬೇಕಾಗುತ್ತದೆ ಎಂದು ಅವರು ನುಡಿದರು.












