9:36 PM Tuesday28 - October 2025
ಬ್ರೇಕಿಂಗ್ ನ್ಯೂಸ್
Kalburgi | ರಾಘಪುರ ದರ್ಗಾ ಹುಂಡಿ ಕಳವು ಪ್ರಕರಣ: ಮುಧೋಳ್ ಪೊಲೀಸರಿಂದ ಓರ್ವ… New Delhi | ಸೌರ ಗುರಿಸಾಧನೆಯಲ್ಲಿ ಜಿ.20 ರಾಷ್ಟ್ರಗಳ ಪೈಕಿ ಭಾರತವೇ ಮುಂಚೂಣಿ:… ಕೇರಳ ಪ್ರವಾಸಿ ಬಸ್ ಗಳಲ್ಲಿ ಡಿಜೆ ಅಳವಡಿಕೆ: ಶಬ್ದ ಮಾಲಿನ್ಯದ ವಿರುದ್ಧ ಆಕ್ಷೇಪ;… ಕಾಂಗ್ರೆಸ್‌ ಸರ್ಕಾರ ರಸ್ತೆಗಳ ಅಭಿವೃದ್ಧಿ ಮರೆತಿದೆ, ಒಂದು ಲೇಯರ್‌ ಗೆ 4-5 ಸಾವಿರ… ಮತ ಚೋರಿ ತಡೆಗೆ ಕೈ ಕಾರ್ಯಪಡೆ!: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ… Chikkamagaluru | ಚಾರ್ಮಾಡಿ ಘಾಟಿಯಲ್ಲಿ ಕಾರು ಪಲ್ಟಿ: 3 ಮಂದಿ ಪ್ರಾಣಾಪಾಯದಿಂದ ಪಾರು Kodagu | ಸುಂಟಿಕೊಪ್ಪ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ಹೃದಯಘಾತದಿಂದ ದಾರುಣ ಸಾವು ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್…

ಇತ್ತೀಚಿನ ಸುದ್ದಿ

ಕೇವಲ ಘೋಷಣೆಗಳಿಗಷ್ಟೇ ಸೀಮಿತವಾದ ಕಾಂಗ್ರೆಸ್ ಬಜೆಟ್: ವಿಧಾನಸಭೆಯಲ್ಲಿ ವೇದವ್ಯಾಸ ಕಾಮತ್ ಆಕ್ರೋಶ

20/03/2025, 22:04

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಕಳೆದ ಎರಡು ವರ್ಷಗಳ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳ ಪಾಲಿಗೆ ಅಭಿವೃದ್ಧಿಯ ಘೋಷಣೆಯನ್ನೂ ಮಾಡಿಲ್ಲ, ಮಾಡಿದ ಅಲ್ಪಸ್ವಲ್ಪ ಘೋಷಣೆಯನ್ನು ಅನುಷ್ಠಾನಕ್ಕೆ ತಂದಿಲ್ಲವೆಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಪಾಲಿಗೆ ಬಜೆಟ್ ಎಂಬುದು ಕೇವಲ ಹಾಳೆಗಳ ಮೇಲಿನ ಅಕ್ಷರಗಳು ಅಷ್ಟೇ ಆದರೆ ಮುಖ್ಯಮಂತ್ರಿಗಳು ಗಂಟೆಗಟ್ಟಲೆ ನಿಂತು ಬಜೆಟ್ ಭಾಷಣ ಮಾಡುವುದು ಯಾಕೆ? ನಾವೆಲ್ಲ ಅದನ್ನು ಕೇಳಿಸಿಕೊಳ್ಳುವುದು ಯಾಕೆ? ಈ ಅಧಿವೇಶನ ಯಾಕೆ? ನನ್ನ ಬಳಿ 2023-24 ಹಾಗೂ 2024-25 ಸಾಲಿನ ಬಜೆಟ್ ನಲ್ಲಿ ಇದೇ ಸರ್ಕಾರ ಮೀನುಗಾರಿಕೆಗೆ, ಪ್ರವಾಸೋದ್ಯಮಕ್ಕೆ, ವಾಣಿಜ್ಯ ಕ್ಷೇತ್ರಕ್ಕೆ ಸೇರಿದಂತೆ ಕೆಲವೇ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನಲ್ಲೇ ಘೋಷಿಸಿರುವ ಪಟ್ಟಿ ಇವೆ. ಅವುಗಳಲ್ಲಿ ಯಾವುದನ್ನು ಸರ್ಕಾರ ಸಮರ್ಥವಾಗಿ ಅನುಷ್ಠಾನಗೊಳಿಸಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸರ್ಕಾರಕ್ಕೆ ಸವಾಲೆಸೆದರು.
ಸದ್ಯ ಕರಾವಳಿ ಜಿಲ್ಲೆಗಳ ಜನತೆ ಕೇವಲ ಘೋಷಣೆಗಳನ್ನು ಕೇಳಿಸಿಕೊಂಡು ಕುಣಿದು ಕುಪ್ಪಳಿಸಬೇಕಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗಿರುವುದು ದುರಂತವಾಗಿದ್ದು, ಕರಾವಳಿಯ ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ಶೂನ್ಯ ಸಂಪಾದನೆಯೇ ಈ ಸರ್ಕಾರದ ದೊಡ್ಡ ಸಾಧನೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು