12:29 AM Tuesday9 - September 2025
ಬ್ರೇಕಿಂಗ್ ನ್ಯೂಸ್
Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ…

ಇತ್ತೀಚಿನ ಸುದ್ದಿ

ಕಾಪಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆ ಅಟ್ಟಹಾಸ: ಸಲಗ ದಾಳಿಗೆ ಮತ್ತೊಂದು ಬಲಿ

05/05/2024, 12:36

ಸಾಂದರ್ಭಿಕ ಚಿತ್ರ
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ತಾಲೂಕು ಆಲ್ದೂರು ಸಮೀಪದ ಕಂಚಿನಕಲ್ ದಯರ್ಗದ ಬಳಿ ಕೂಲಿ ಕಾರ್ಮಿಕರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ.
ಆಲ್ದೂರು ಹೋಬಳಿ, ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ.
ಕೂಲಿ ಕಾರ್ಮಿಕ ಆನಂದ ಪೂಜಾರಿ(55 ) ಕಾಡಾನೆ ದಾಳಿಯಿಂದ ಮೃತಪಟ್ಟವರು.
ಇಂದು ಮುಂಜಾನೆ ಆನಂದ ಪೂಜಾರಿ ಅವರು ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು ಕಾಡಾನೆ ದಾಳಿಯಿಂದ ಆನಂದ ಪೂಜಾರಿಯವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ನೂರ್ ಅಹಮ್ಮದ್ ಎಂಬುವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಆನಂದ ಪೂಜಾರಿಯವರು ಹಲವು ವರ್ಷಗಳಿಂದ ಈ ಎಸ್ಟೇಟ್‌ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಪಂ ಸದಸ್ಯ ರಾಜು ಪೂಜಾರಿ ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ನಿರಂತರವಾಗಿ ಜೀವ ಹಾನಿಯಾಗುತ್ತಿದ್ದು ಈಗ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ.
ಇತ್ತೀಚೆಗೆ ಕೆಲ ತಿಂಗಳ ಹಿಂದೆ ಆಲ್ದೂರು ಭಾಗದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು