ಇತ್ತೀಚಿನ ಸುದ್ದಿ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದಿನಿಂದ ದತ್ತಜಯಂತಿ ಸಂಭ್ರಮ: ಸಾವಿರಾರು ಭಕ್ತರಿಂದ ಮಾಲಾಧಾರಣೆ; ಖಾಕಿ ಹೈ ಅಲರ್ಟ್
06/12/2024, 12:52

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದತ್ತಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತ ಭಕ್ತರು ಮಾಲಾಧಾರಣೆ ಮಾಡಿದರು.
*ಮಾಜಿ ಸಚಿವ ಸಿ.ಟಿ.ರವಿ ಮಾಲಾಧಾರಣೆ*: ಮಾಜಿ ಸಚವ ಸಿ.ಟಿ.ರವಿ ಜೊತೆ ಭಜರಂಗದಳ ಮುಖಂಡ ರಘು ಸಖಲೇಶಪುರ ಮಾಲಾಧಾರಣೆ ಮಾಡಿದರು. 100ಕ್ಕೂ ಹೆಚ್ಚು ದತ್ತಭಕ್ತರು ಮಾಲೆ ಧರಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಸಾವಿರಾರು ದತ್ತಭಕ್ತರಿಂದ ಮಾಲಾಧಾರಣೆ ನಡೆಯಿತು. ಇಂದಿನಿಂದ 9 ದಿನಗಳ ಕಾಲ ದತ್ತ ಭಕ್ತರಿಂದ ವ್ರತಾಚರಣೆ ನಡೆಯಲಿದೆ.
ಡಿಸೆಂಬರ್ 14 ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.
12ರಂದು ಅನಸೂಯ ಜಯಂತಿ, 13 ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 14 ರಂದು 25 ಸಾವಿರಕ್ಕೂ ಅಧಿಕ ಭಕ್ತರಿಂದ ದತ್ತಪೀಠದಲ್ಲಿ ಪಾದುಕೆ ದರ್ಶನ ನಡೆಸಲಿದ್ದಾರೆ. 9 ದಿನಗಳ ಕಾಲ ಜಿಲ್ಲಾದ್ಯಂತ ಖಾಕಿ ಹೈ ಅಲರ್ಟ್ ಆಗಿದೆ.