7:12 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕಾಫಿನಾಡಿನಲ್ಲಿ ಡೆಂಗ್ಯು ಅಟ್ಟಹಾಸ: ಚಿಕ್ಕಮಗಳೂರು ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಪ್ರಕರಣಗಳು ಪತ್ತೆ; ಆಸ್ಪತ್ರೆಗಳ ಮುಂದೆ ಜನಜಂಗುಳಿ

11/06/2024, 16:50

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಭಾರೀ ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು,
ತ್ರಿಶತಕ ದಾಟಿದೆ. ಜಿಲ್ಲೆಯಲ್ಲಿ 350 ಡೆಂಗ್ಯೂ ಪ್ರಕರಣಗಳು ದೃಢ ಪಟ್ಟಿದೆ.

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಫಿನಾಡು ಚಿಕ್ಕಮಗಳೂರಲ್ಲಿ ಕಳೆದೊಂದು ದಶಕದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಡೆಂಗ್ಯು ಮಹಾಮಾರಿ ತಾಂಡವವಾಡ್ತಿದೆ. ಪ್ರತಿನಿತ್ಯ ಜಿಲ್ಲೆಯಾದ್ಯಂತ ಐದಾರು ಪ್ರಕರಣಗಳು ದಾಖಲಾಗುತ್ತಿದ್ದು, ಸದ್ಯಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿದ್ದು ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.


ಕಾಫಿನಾಡನ್ನೇ ಕಬ್ಜಾ ಮಾಡಿರೋ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಂದಿಗೆ 300ರ ಗಡಿ‌ ದಾಟಿದೆ. ಇದರಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಒಳಗೂ ಜನ, ಹೊರಗೂ ಜನಜಂಗುಳಿ ಸೇರಿದೆ. ಚಕ್ಕಮಗಳೂರು ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಮುಂದೆ ಜನಜಂಗುಳಿ
ಕಂಡುಬರುತ್ತಿರುವ ಚಿತ್ರಣವಾಗಿದೆ. ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗುತ್ತಿದೆ. ಈ ಮಧ್ಯೆ ಡೆಂಗ್ಯೂ ಪ್ರಕರಣಗಳ ರುದ್ರನರ್ತನ ಕೂಡ ದಿನದಿಂದ ದಿನಕ್ಕೆ ಜಿಲ್ಲೆಯನ್ನ ಕಾಡುತ್ತಿದೆ. ಚಿಕ್ಕಮಗಳೂರು ತಾಲೂಕು ಒಂದರಲ್ಲೇ 250 ಪ್ರಕರಣಗಳಿದ್ದು ಜಿಲ್ಲೆಯಾದ್ಯಂತ 350 ಡೆಂಗ್ಯೂ ಪ್ರಕರಣಗಳು ತಾಂಡವವಾಡುತ್ತಿದೆ. ಅದೂ ಕಳೆದ ಎರಡು ತಿಂಗಳಲ್ಲೇ ಹೆಚ್ಚು. ಹೆಮ್ಮಾರಿ ಡೆಂಗ್ಯೂ ಈ ಪರಿ ಅಟ್ಯಾಕ್ ಮಾಡಿರೋದು ಆರೋಗ್ಯ ಇಲಾಖೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಜ್ವರ ಕಾಣಿಸಿಕೊಂಡರೆ ಸಾಕು ಡೆಂಗ್ಯೂ ಕಂಫರ್ಮ್ ಅನ್ನುವ ರೀತಿ ಆಗಿದೆ. ಸದ್ಯದ ಸ್ಥಿತಿ-ಗತಿ. ಆದ್ರೆ, ಆರೋಗ್ಯ ಇಲಾಖೆ ಅದೃಷ್ಟವಶಾತ್ ಈವರೆಗೂ ಸಾವು ಸಂಭವಿಸಿಲ್ಲ. ಜ್ವರ ಕಾಣಿಸಿಕೊಂಡರೇ ಮನೆಯಲ್ಲಿ ಔಷಧಿ ತೆಗೆದುಕೊಳ್ಳುವುದಾ ಬಿಟ್ಟು ಆಸ್ಪತ್ರೆ ಬಂದು ಚಿಕಿತ್ಸೆ ಪಡೆಯಿರಿ ಅಂತ ಮನವಿ ಮಾಡಿದ್ದಾರೆ.
*ಮುಂದಿನ ದಿನಗಳಲ್ಲಿ ಬೆಡ್ ಗಳ ಸಮಸ್ಯೆ:* ಇಷ್ಟದ್ರು ಇನ್ನು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಮುಖದ ಲಕ್ಷಣ ಕಾಣ್ತಿಲ್ಲ. ತರೀಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಎನ್. ಆರ್. ಪುರ, ಕೊಪ್ಪ ತಾಲೂಕುಗಳಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಒಂದು ದಶಕದ ಬಳಿಕ ಈ ಪರಿ ಮಹಾಮಾರಿ ಹರಡಿದ್ದು ಇದೇ ಮೊದಲು. ಬೇಸಿಗೆ ಅವಧಿಯಲ್ಲಿ ಮಳೆ ಇಲ್ಲದೆ ಚರಂಡಿ, ಮೋರಿ-ಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆಗಳ ಲಾರ್ವ ಪ್ರಮಾಣ ಹೆಚ್ಚಾಗಿ ಸೊಳ್ಳೆಗಳ ಕಾಟವು ಜಿಲ್ಲೆಯಲ್ಲಿ ಮಿತಿ ಮೀರಿದೆ. ಇದರ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಅಂತಾರೆ ವೈದ್ಯರು. ಜೊತೆಗೆ ವಾರಕ್ಕೊಮ್ಮೆ ನೀರು ಬರುತ್ತೆ ಅಂತ ನೀರನ್ನ ಶೇಖರಿಸಿಕೊಂಡು ಮುಚ್ಚದೆ ಇರೋದ್ರಿಂದಲೂ ಡೆಂಗ್ಯೂ ಬಂದಿದೆ ಅನ್ನೋದು ವೈದ್ಯರ ಸ್ಪಷ್ಟನೆ. ರೋಗದಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಅವಶ್ಯಕತೆ ಇದ್ದರೆ ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದ್ದು, ಉಳಿದವರನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ, ಡೆಂಗ್ಯೂ ಆತಂಕ ಬೇಡ, ಎಚ್ಚರವಿರಲಿ ಎನ್ನುವ ಸಂದೇಶವನ್ನು ಚಿಕ್ಕಮಗಳೂರು ಆರೋಗ್ಯ ಇಲಾಖೆ ನೀಡುತ್ತಿದ್ದು, ಸೊಳ್ಳೆಗಳಿಂದ ಸೂಕ್ತ ರಕ್ಷಣೆ ಪಡೆಯಲು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೂ, ಈ ಪರಿ ಡೆಂಗ್ಯೂ ಮಹಾಮಾರಿ ಜಿಲ್ಲೆಯನ್ನು ಕಾಡುತ್ತಿದ್ದು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮತ್ತಷ್ಟು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಡ್ ಗಳ ಸಮಸ್ಯೆ ಎದುರಾದರು ಆಶ್ಚರ್ಯವಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು