ಇತ್ತೀಚಿನ ಸುದ್ದಿ
ಕಾಫಿನಾಡಿನ ಏಕೈಕ ಕೈ ಶಾಸಕರಿಗೆ ಬಂಡಾಯದ ಬಿಸಿ: ಶೃಂಗೇರಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡನ ಸಿದ್ಧತೆ
30/03/2023, 12:19
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಾಂ
ಕಾಫಿನಾಡು ಚಿಕ್ಕಮಗಳೂರಿನ ಏಕೈಕ ಕಾಂಗ್ರೆಸ್ ಶಾಸಕನ
ವಿರುದ್ಧ “ಕೈ” ಪಾಳಯದಲ್ಲಿ ಬಂಡಾಯದ ಬಾವುಟ ಹಾರಿಸಲಾಗಿದೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರಿಗೆ ಬಂಡಾಯದ ಬಿಸಿ ತಟ್ಟಲಾರಂಭಿಸಿದೆ.

ಲಕ್ಷ ಖರ್ಚು ಮಾಡಿದ್ರೆ ನೂರು ಜನಕ್ಕೆ ನೀರು ಕೊಡಬಹುದು.
ಅದನ್ನ ಬಿಟ್ಟು ಶಾಸಕರು ಯಾರ್ದೋ ತೋಟದಲ್ಲಿ 35 ಲಕ್ಷ ಖರ್ಚು ಮಾಡಿ ಚೆಕ್ ಡ್ಯಾಂ ನಿರ್ಮಿಸುತ್ತಾರೆ. ಶಾಸಕರಿಂದ ಶೃಂಗೇರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿ ಮೊಹಮ್ಮದ್
ಇಲಿಯಾಸ್ ಸ್ಪರ್ಧೆಗಿಳಿದಿದ್ದಾರೆ.
ರಾಜೇಗೌಡರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಅವರು ಸಿದ್ಧತೆ ನಡೆಸಿದ್ದಾರೆ. ಶೃಂಗೇರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ ಇಲಿಯಾಸ್ ಸ್ಪರ್ಧೆ ನಡೆಸಲು ಎಲ್ಲ ತಯಾರಿ ನಡೆಸಿದ್ದಾರೆ.
ಪಕ್ಷದ ನಡೆಯಿಂದ ಬೇಸತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ರಾಜೇಗೌಡರಿಂದ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಗೋರಿಗಂಡಿಯ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಇಲಿಯಾಸ್ ಚುನಾವಣೆ ಎದುರಿಸುವ ಘೋಷಣೆ ಮಾಡಿದ್ದಾರೆ.














