2:14 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ ಎಣ್ಣೆ ಮುಟ್ಟಿಲ್ಲ!!

29/11/2021, 18:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಾಲ್ಕು ಬಾರ್ ಗಳ ಬೀಗ ಹೊಡೆದು ಕಳ್ಳತನಕ್ಕೆ ಯತ್ನಿಸಿರೋ ಕಳ್ಳರು ಹಣ ಸಿಗದಿದ್ದಾಗಲೂ ಎಣ್ಣೆ ಮುಟ್ಟದೆ ಹಣ ಸಿಗಲಿಲ್ಲವೆಂದು ಪ್ರಾಮಾಣಿಕ ಬರೀಗೈಲಿ ವಾಪಸ್ ಹೋದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. 

ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಾಲೂಕಿನ ಮೂಡಿಗೆರೆ ಪಟ್ಟಣದ ಚಂದನ್ ಬಾರ್, ಬಣಕಲ್ ಗ್ರಾಮದ ಸಂಭ್ರಮ್ ಬಾರ್ ಸೇರಿದಂತೆ ಗೋಣಿಬೀಡು ಹಾಗೂ ಚೀಕನಹಳ್ಳಿಯಲ್ಲಿ ಕಳ್ಳರು ನಾಲ್ಕು ಬಾರ್ ಗಳ ಬೀಗ ಹೊಡೆದು ಕಳ್ಳತನಕ್ಕೆ ಯತ್ನಿದ್ದರು. ಆದರೆ, ಕಳ್ಳರಿಗೆ ನಾಲ್ಕು ಬಾರ್ ನಲ್ಲೂ ಹಣ ಸಿಗಲಿಲ್ಲ. ಹಣ ಸಿಗದಿದ್ದಾಗ ಕಳ್ಳರು ಮದ್ಯವನ್ನ ಮುಟ್ಟದೆ ವಾಪಸ್ಸಾಗಿದ್ದಾರೆ. ಇದನ್ನ ಕಂಡ ಸ್ಥಳಿಯರು ಈ ಕಳ್ಳರು ಎಣ್ಣೆ ಹೊಡೆಯುವುದಿಲ್ಲ, ಇವ್ರು ಹಣದ ಕಳ್ಳರು ಅನ್ಸತ್ತೆ ಎಂದು ಕಾಮಿಡಿ ಮಾಡಿದ್ದಾರೆ. ಬಾರ್ ಗಳ ಅಕ್ಕಪಕ್ಕದ ಅಂಗಡಿಗಳಲ್ಲಿನ ಸಿಸಿಟಿವಿ ಫುಟೇಜ್ ನಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಎಲ್ಲರೂ ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದರು ಎಂಬುದು ಖಾತ್ರಿಯಾಗಿದೆ. ಮೂಡಿಗೆರೆ, ಬಣಕಲ್ ಹಾಗೂ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊರೋನಾ ಎರಡನೇ ಹಂತದ ಲಾಕ್ ಟೈಂನಲ್ಲಿ ಚಿಕ್ಕಮಗಳೂರು ನಗರದ ಬಾರ್ ಗೆ ಕಳ್ಳರು ಕನ್ನ ಹಾಕಿದ್ದರು. ಈ ವೇಳೆ ಕಳ್ಳರು ಹಣ ಹಾಗೂ ಕಾಸ್ಟ್ಲಿ ಎಣ್ಣೆ ಮುಟ್ಟಿರಲಿಲ್ಲ. ಲೋಕಲ್ ಬ್ರ್ಯಾಂಡ್ ಬಿಟ್ಟಿರಲಿಲ್ಲ. ಆದರೆ, ಈಗ ಮೂಡಿಗೆರೆಯಲ್ಲಿ ಬಾರ್ ಬೀಗ ಹೊಡೆದಿರೋ ಚೋರರು ಹಣ ಸಿಗದಿದ್ದಾಗ ಎಣ್ಣೆಯನ್ನೂ ಮುಟ್ಟದೆ ವಾಪಸ್ಸಾಗಿರೋದು ಸ್ಥಳೀಯಲ್ಲಿ ಆಶ್ಚರ್ಯ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರೋ ಮೂಡಿಗೆರೆ ಪೊಲೀಸರು ಪ್ರಾಮಾಣಿಕ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು