ಇತ್ತೀಚಿನ ಸುದ್ದಿ
ಕಾಫಿನಾಡಲ್ಲಿ ದರ್ಗಾ- ದೇವಾಲಯ ವಿವಾದ ಪ್ರಕರಣ: ಎಸ್ ಡಿಪಿಐ ಎಂಟ್ರಿ; ಬಿಗಿ ಪೊಲೀಸ್ ಬಂದೋಬಸ್ತ್
14/03/2023, 11:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಾಂ
ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಜಿದ್ ನಗರದ ದರ್ಗಾ- ದೇವಾಲಯ ವಿಷಯದಲ್ಲಿ ವಿವಾದ ಉಂಟಾಗಿದ್ದು, ಎಸ್ ಡಿಪಿಐ ಎಂಟ್ರಿ ಕೊಟ್ಟಿದೆ.
ಹಜರತ್ ಸೈಯದ್ ಬೂದ್ ಷಾ ದರ್ಗಾಕ್ಕೆ ಭೇಟಿ ನೀಡಲಿರುವ ಎಸ್.ಡಿ.ಪಿ.ಐ ಮುಖಂಡರು ದರ್ಗಾ ಕಮಿಟಿ ಸದಸ್ಯರ ಜೊತೆಗೆ ಸಭೆ ನಡೆಸಲಿದ್ದಾರೆ.






ಹಿಂದೂ ಸಂಘಟನೆಗಳು ಇದು ದರ್ಗಾವಲ್ಲ ಹಿಂದೂಗಳ ಚಂದ್ರಮೌಳೇಶ್ವರ ದೇವಾಲಯ ಎಂದು ಪಟ್ಟು ಹಿಡಿದಿದೆ. ದರ್ಗಾ -ದೇವಾಲಯ ವಿವಾದದ ಬೆನ್ನಲ್ಲೇ ಎಸ್.ಡಿ.ಪಿ.ಐ. ಮುಖಂಡರು ಎಂಟ್ರಿ ಕೊಟ್ಟಿದ್ದಾರೆ.
ನೆನ್ನೆಯಿಂದ ದರ್ಗಾದಲ್ಲಿ ಉರೂಸ್ ಆರಂಭವಾಗಿದೆ. ಇಂದು ನಡೆಯಲಿರುವ ಉರುಸ್ ನಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ಭಾಗವಹಿಸಲಿದ್ದಾರೆ. ದರ್ಗಾದ ಬಳಿ ನೂರಾರು ಪೊಲೀಸರ ನಿಯೋಜನೆ ಮಾಡಲಾಗಿದೆ.














