ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಮುಂದುವರಿದ ಕಾಡಾನೆ ದಾಂಧಲೆ; ಚಿಂದಿ ಆರಿಸಲು ಬಂದವರ ಟೆಂಟ್ ಮೇಲೆ ದಾಳಿ
26/12/2022, 11:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಾಸನ ಜಿಲ್ಲೆಯ ಹಗರೇ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬುವರು ಚಿಂದಿ ಆರಿಸಲು ಬಂದಿದ್ದು ಮೂಡಿಗೆರೆ ತಾಲೂಕಿನ ಬಣಕಲ್ ಪಶು ಆಸ್ಪತ್ರೆ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ನಾಗವಲ್ಲಿ ಎಂಬವರಿಗೆ ಸೊಂಟ ಹಾಗೂ ಎದೆ ಭಾಗಕ್ಕೆ ಪೆಟ್ಟಾಗಿದ್ದು, ಗಂಡುಗುಸೆ ಎಂಬುವರಿಗೆ ಕಾಲಿಗೆ ಪೆಟ್ಟಾಗಿದೆ. ಬಣಕಲ್ ನ ಸಾರ್ವಜನಿಕರು ಹಾಗೂ ಸಮಾಜಸೇವಕ ಆರಿಫ್ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ರಕ್ಷಕ ಮೊಸಿನ್ ಉಪವಲಯನ್ಯಾಧಿಕಾರಿ ಉಮೇಶ್ ಭೇಟಿ ಕೊಟ್ಟಿದ್ದಾರೆ.