ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಮಳೆ ಜತೆ ಕಾಡಾನೆ ಕಾಟ: ಸಲಗಗಳ ದಾಂಧಲೆಗೆ 1 ಎಕರೆ ಕಾಫಿತೋಟ ನಾಶ
14/09/2022, 20:49
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜನರಿಗೆ ಮಳೆ ಜತೆ ಕಾಡಾನೆ ಕಾಟ ವಿಪರೀತವಾಗಿದೆ. ಕಾಡಾನೆಗಳ ದಾಂಧಲೆಗೆ ಒಂದು ಎಕರೆ ಕಾಫಿ ತೋಟ ನಾಶವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾಫಿ ತೋಟದಲ್ಲಿ ನಾಲ್ಕು ಕಾಡಾನೆಗಳ ಗುಂಪು ದಾಂಧಲೆ ನಡೆಸಿವೆ.
ಪುಷ್ಪ-ರಾಜು ಎಂಬುವರಿಗೆ ಸೇರಿದ ಕಾಫಿ ತೋಟ ನಾಶವಾಗಿದೆ. ಕಳೆದ 6 ದಿನದ ಹಿಂದೆ ಅರ್ಜುನ್ ಎಂಬವರನ್ನು ಕಾಡಾನೆ ಬಲಿ ಪಡೆದಿತ್ತು.
ಒಂದೆಡೆ ಮಳೆ ಕಾಟ, ಇನ್ನೊಂದೆಡೆ ಕಾಡಾನೆ ಕಾಟ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರ ಮನವಿ ಮಾಡಿದ್ದಾರೆ.