9:07 PM Sunday6 - October 2024
ಬ್ರೇಕಿಂಗ್ ನ್ಯೂಸ್
ರಡ್ಡೇರಹಟ್ಟಿಯಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್: 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ…

ಇತ್ತೀಚಿನ ಸುದ್ದಿ

ಸಿಎಂ ತವರು ಕ್ಷೇತ್ರದಲ್ಲೇ ಭೂ ಮಾಫಿಯಾದ ಅಟ್ಟಹಾಸ!: ಸತ್ತವರ ಹೆಬ್ಬೆಟ್ಟನ್ನು ನಕಲು ಮಾಡಿ ಬಡವರ ಭೂಮಿ ಕದ್ದ ಭೂಗಳ್ಳರು?!!

24/05/2024, 14:51

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮೈಸೂರಿನ ಮಹಾರಾಜರಿಗೆ ಪ್ರಿಯ ತಾಣವೆಂದರೆ ಅದುವೇ ಎಚ್ ಡಿ ಕೋಟೆ. ನಿಸರ್ಗದ ಸೌಂದರ್ಯವನ್ನು ಮಡಿಲಲ್ಲಿಟ್ಟುಕೊಂಡು ಒಂದೊಳ್ಳೆ ಪ್ರವಾಸಿ ತಾಣವಾಗಿ ಪ್ರಪಂಚದ ಭೂಪಟದಲ್ಲಿ ಪ್ರಸಿದ್ಧಿಗಳಿಸಿದೆ. ಹೀಗಿರುವಾಗ 1975ರಲ್ಲಿ ಕಬಿನಿ ಜಲಾಶಯ ಮತ್ತು 1957ರಲ್ಲಿ ನುಗು ಜಲಾಶಯ ಹಾಗೆ ತಾರಕ ಮತ್ತು ಹೆಬ್ಬಾಳ ಜಲಾಶಯಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆಯಲು ಮೂಲ ಕಾರಣಕರ್ತರಾಗಿರುವ 30 ಕುಟುಂಬಗಳ ಕಾರ್ಮಿಕರ ಬದುಕು ಇಂದು ಭೂ ಮಾಫಿಯಗಳ ಆರ್ಭಟಕ್ಕೆ ಬೆಚ್ಚಿಬಿದ್ದು ಗ್ರಾಮವನ್ನೇ ತೊರೆದಿರುವ ಘಟನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭದ್ರಕೋಟೆ ಎನಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಗೆ ಸೇರಿರುವ ಪಿ. ಸಿ. ವರ್ಗಿಸ್ ಕಾಲೋನಿಯಲ್ಲಿ ನಡೆದಿದೆ.
ಕಬಿನಿ ಮತ್ತು ನುಗು ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಬರೋಬರಿ 30 ಕುಟುಂಬಗಳ ಕಾರ್ಮಿಕರು ನಿರಂತರವಾಗಿ ಪ್ರಾರಂಭದಿಂದ ಜಲಾಶಯಗಳ ಕಾಮಗಾರಿ ಮುಗಿಯುವ ತನಕ ಬೆವರಿನ ಜೊತೆ ರಕ್ತ ಸುರಿಸಿದ ಹಗಲಿರುಳು ದುಡಿದಿದ್ದಾರೆ.
ಇವರ ಶ್ರಮವನ್ನು ಗಮನಿಸಿದ ಅಂದಿನ 1984ರ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಬೋವಿ ಜನಾಂಗಕ್ಕೆ ಸೇರಿದ 30 ಕುಟುಂಬಗಳ ಜೀವನೋಪಾಯಕ್ಕೆ ಎಂದು ತಲಾ ಒಬ್ಬರಿಗೆ ಐದು ಎಕರೆ ಉಳುವ ಭೂಮಿ ಮಂಜೂರು ಮಾಡಿ ಆದೇಶ ಪತ್ರಗಳನ್ನು ಕೂಡ ನೀಡಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಪಿಸಿ ವರ್ಗಿಸ್ ಕಾಲೋನಿಯಲ್ಲಿ ವಾಸದ ಮನೆಗಳನ್ನು ಕೂಡ ಕಲ್ಪಿಸಿ ಕೊಟ್ಟಿದ್ದರು. ಜಲಾಶಯ ಕಾಮಗಾರಿ ಪೂರ್ಣಗೊಂಡ ಬಳಿಕ ಸರ್ಕಾರ ನೀಡಿದ ಉಳುವ ಭೂಮಿಯ ಪತ್ರಗಳನ್ನು ಜೋಪಾನವಾಗಿಟ್ಟುಕೊಂಡು ಮಳೆಯಶ್ರಿತ ಉಳುವ ಭೂಮಿಯಲ್ಲಿ ಬೆಳೆ ಮಾಡಿ ಕುಟುಂಬಸ್ಥರ ಜೊತೆ ಸುಖ ಜೀವನ ನಡೆಸಲು ಮುಂದಾದರು ಸತತ 30 ವರ್ಷಗಳ ಕಾಲ ಸರ್ಕಾರ ನೀಡಿದ ಉಳುವ ಭೂಮಿಯಲ್ಲಿ ಬೆಳೆ ಮಾಡಿ ಇಂದಿಗೂ ಕೂಡ ಮಕ್ಕಳು ಮೊಮ್ಮಕ್ಕಳ ಜೊತೆಗೂಡಿ ಜಮೀನಿನ ಸುಪರ್ದಿಯಲ್ಲಿದ್ದಾರೆ. ಹೀಗಿರುವಾಗ ಇದೇ ಸಂದರ್ಭದಲ್ಲಿ 1994 -95ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ಗಲಭೆ ಪ್ರಾರಂಭವಾಗಿ ಕೆಲ ಕಾರ್ಮಿಕರು ಘರ್ಷಣೆಗೆ ಬೆದರಿ ತಮ್ಮ ಕುಟುಂಬಸ್ಥರ ಜೊತೆ ಬೇರೆಡೆ ತೆರಳಲು ಮುಂದಾದರು. ಇಂದಿಗೂ ಕೂಡ ಪಿಸಿ ವರ್ಗಿಸ್ ಕಾಲೋನಿಯ ಕೂಲಿ ಕಾರ್ಮಿಕರು ಮತ ಚಲಾಯಿಸುತ್ತಾರೆ. ಪಡಿತರ ಕಾರ್ಡುಗಳು ಮತ್ತು ಆಧಾರ ಕಾರ್ಡುಗಳನ್ನು ಹೊಂದಿದ್ದಾರೆ. ಯಾವುದೇ ಮೂಲಭೂತ ಸೌಲಭ್ಯಗಳು ನಾಪತ್ತೆಯಾಗಿದ್ದರೂ ಕೂಡ ಅಲ್ಲಿ 30 ಕುಟುಂಬಗಳ ಜನರು ಜೀವನ ಸಾಗಿಸುತ್ತಿದ್ದಾರೆ. ಈ ಕೂಲಿ ಕಾರ್ಮಿಕರ ಬಡತನ ಮತ್ತು ಅನಕ್ಷರತೆಯನ್ನು ಗಮನಿಸಿದ ಭೂ ಮಾಫಿಯಾ ಗಳು ವಯೋ ಸಹಜ ಮತ್ತು ಅನಾರೋಗ್ಯದಿಂದ ಸಾವನ್ನಪ್ಪಿರುವ ಕೂಲಿ ಕಾರ್ಮಿಕರ ನಕಲು ಹೆಬ್ಬೆಟ್ಟನ್ನು ಬಳಸಿಕೊಂಡು ಸರ್ಕಾರ ನೀಡಿರುವ ಇವರ ಉಳುವ ಭೂಮಿಯನ್ನು ನುಂಗಲು ಮುಂದಾಗಿದ್ದಾರೆ. ಅಕ್ಷರ ಜ್ಞಾನವಿಲ್ಲದ ಶ್ರಮಜೀವಿ ಕೂಲಿ ಕಾರ್ಮಿಕರು ಯಾವ ಕಚೇರಿ ಮತ್ತು ಯಾವ ಅಧಿಕಾರಿಯ ಬಳಿ ತೆರಳಿದರೆ ನಮಗೆ ನ್ಯಾಯ ಸಿಗುತ್ತದೆ ಎಂಬುದನ್ನು ತಿಳಿಯದೆ ಭೂಗಳ್ಳರ ಆರ್ಭಟಕ್ಕೆ ಬೆಚ್ಚಿ ಬಿದ್ದು ಪಿಸಿ ವರ್ಗಿಸ್ ಕಾಲೋನಿಯನ್ನೇ ತೊರೆಯಲು ಮುಂದಾಗಿದ್ದಾರೆ. ದಿನನಿತ್ಯ ಭೂಗಳ್ಳರ ಭಂಟರು ಬಡ ಕಾರ್ಮಿಕರಿಗೆ ಬೆದರಿಕೆಗಳನ್ನು ಒಡ್ಡಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತು ಉಪ ವಿಭಾಗಾಧಿಕಾರಿ ಶಿವಮೂರ್ತಿ ಗುಂಡ್ಲುಪೇಟೆಯ ತಹಸೀಲ್ದಾರ್ ಮಂಜುನಾಥ್ ಭೂಮಾಫಿಯಗಳಿಗೆ ಚಾಟಿ ಬಿಸಿ ಕಬಿನಿ, ನುಗು, ತಾರಕ ಮತ್ತು ಹೆಬ್ಬಾಳ ಜಲಾಶಯ ನಿರ್ಮಾಣವಾಗಲು ಮೂಲ ಕಾರಣಕರ್ತರಾಗಿರುವ ಪಿಸಿ ವರ್ಗಿಸ್ ಕಾಲೋನಿಯ ಶ್ರಮಜೀವಿಗಳ ಬೆನ್ನೆಲುಬಾಗಿ ನಿಂತು ನ್ಯಾಯ ಕಲ್ಪಿಸಿ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಪಿಸಿ ವರ್ಗಿಸ್ ಕಾಲೋನಿಯಲ್ಲಿ ವಾಸ ಮಾಡುವ ಕೂಲಿ ಕಾರ್ಮಿಕರು ಮತ್ತು ಶ್ರಮಜೀವಿಗಳು ನಮ್ಮ ಬಳಿ ಬಂದು ಸರ್ಕಾರ ಹಿಂದೆ ನೀಡಿದ ಉಳುವ ಭೂಮಿಯ ದಾಖಲಾತಿ ಪತ್ರಗಳು ಮತ್ತು ಅವರಿಗೆ ಆಗುತ್ತಿರುವ ತೊಂದರೆಗಳನ್ನು ಅರ್ಜಿಯ ಮೂಲಕ ನೀಡಿದರೆ ಅದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ನಾವು ಮುಲಾಜಿಲ್ಲದೆ ಕ್ರಮ ಕೈಗೊಂಡು ಸೂಕ್ಷ್ಮ ರೀತಿಯಲ್ಲಿ ಪರಿಶೀಲನೆ ಮಾಡಿ ನ್ಯಾಯ ಕಲ್ಪಿಸಿಕೊಡಲು ಮುಂದಾಗುತ್ತೇವೆ ಎಂದು ಗುಂಡ್ಲುಪೇಟೆ ತಹಸೀಲ್ದಾರ್
ಮಂಜುನಾಥ್ ಹೇಳಿದ್ದಾರೆ.


ಡಿಸಿ ವರ್ಗಿಸ್ ಕಾಲೋನಿಯ 30 ಕುಟುಂಬಗಳ ವಾಸಿಗಳು ಹೊರ ರಾಜ್ಯದ ಭೂ ಮಾಫಿಯಾ ಗಳ ವ್ಯಕ್ತಿಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ನಮ್ಮ ಗ್ರಾಮದ ಸನಿಹದಲ್ಲೇ ಇರುವಂತಹ ದೆಸೆಯಿಂದ ನಾವು ಕೂಡ ಸಾಕಷ್ಟು ಬಾರಿ ಗಮನಿಸಿದ್ದೇವೆ ಗುಂಡ್ಲುಪೇಟೆ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಪಿಸಿ ವರ್ಗಿಸ್ ಕಾಲೋನಿಯ ನೊಂದ ಕಾರ್ಮಿಕರಿಗೆ ನ್ಯಾಯ ಕಲ್ಪಿಸಿಕೊಡಲು ಮುಂದಾಗ ಬೇಕಿದೆ ಎಂದು ಹಂಚಿಪುರ ಗ್ರಾಮದ ವಾಸಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು