3:08 AM Friday6 - February 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,…

ಇತ್ತೀಚಿನ ಸುದ್ದಿ

ಸಿಎಂ ತವರಿನಲ್ಲೇ 3 ತಲೆಮಾರುಗಳಿಂದ ವಾಸವಿದ್ದ 4 ಹಂದಿ ಜೋಗಿ ಕುಟುಂಬ ಬೀದಿಪಾಲು: ರಾತ್ರೋರಾತ್ರಿ ಜೆಸಿಬಿಯಿಂದ ವಾಸದ ಗುಡಿಸಲು ನೆಲಸಮ

07/01/2025, 09:01

* *ಪೊಲೀಸರು ಮತ್ತು ಜಮೀನು ಮಾಲೀಕನ ಅಮಾನವೀಯ ವರ್ತನೆಗೆ ಸಾಮೂಹಿಕ ಆತ್ಮಹತ್ಯೆಗೆ ಹಂದಿ ಜೋಗಿ ಕುಟುಂಬ ನಿರ್ಧಾರ...?*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮೂರು ತಲೆಮಾರುಗಳಿಂದ ವಾಸವಿದ್ದ ಜಾಗದಿಂದ ವಂಚಿತರಾಗಿ ಎರಡು ದಲಿತ ಹಂದಿ ಜೋಗಿ ಕುಟುಂಬಗಳು ರಾತ್ರೋ ರಾತ್ರಿ ವಸತಿಹೀನರಾಗಿ ಬೀದಿಗೆ ಬಿದ್ದ ಘಟನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನೂರಾರು ವರ್ಷಗಳಿಂದ ವಾಸವಿದ್ದ ಮನೆಗಳನ್ನ 7 ದಿನಗಳ ಹಿಂದೆ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ ಬೀದಿ ಬದಿಯನ್ನೇ ಕುಟುಂಬಗಳು ಆಶ್ರಯಿಸಿವೆ. ತಮಗೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೀದಿಗೆ ಬಿದ್ದಿರುವ ಹಂದಿ ಜೋಗಿ ಕುಟುಂಬಸ್ಥರು ಹೇಳಿದ್ದಾರೆ.


ಹೊರಳವಾಡಿ ಹೊಸೂರು ಗ್ರಾಮದ ಸರ್ವೆ ನಂ 476/2017 ರ 6 ಗುಂಟೆ ಜಮೀನಿನಲ್ಲಿ ಕಳೆದ ನೂರಾರು ವರ್ಷಗಳ ಹಿಂದೆ ಹಂದಿ ಜೋಗಿ ಕುಟುಂಬದ ಹಿರಿಯರಾದ ವೆಂಕಟಯ್ಯ ಎಂಬುವರು ಜಮೀನಿನ ಮಾಲೀಕರಾದ ಪುಟ್ಟನಂಜಪ್ಪ ಎಂಬುವವರಿಗೆ ಹಣ ನೀಡಿ ಖರೀದಿಸಿದ್ದರೆಂದು ಹೇಳಲಾಗುತ್ತಿದೆ. ಮೂರು ತಲೆಮಾರುಗಳಿಂದ ಇದೆ ಜಮೀನಿನಲ್ಲಿ ವಾಸವಿದ್ದರೂ ಈ ಸಂಬಂಧ ಇವರ ಬಳಿ ಯಾವುದೇ ದಾಖಲೆ ಪತ್ರಗಳು ಇರುವುದಿಲ್ಲ. ಬದಲಾಗಿ ಹಣ ನೀಡಿದ್ದ ಹಂದಿ ಜೋಗಿ ಕುಟುಂಬದ ಹಿರಿಯ ವೆಂಕಟಯ್ಯ ಹಾಗೂ ಹಣ ಪಡೆದ ಜಮೀನು ಮಾಲೀಕರಾದ ಪುಟ್ಟನಂಜಪ್ಪ ಇಬ್ಬರು ಮೃತಪಟ್ಟಿರುತ್ತಾರೆ.
ಆದರೆ ಈಗ ಈ ಜಮೀನಿಗೆ ಪುಟ್ಟ ನಂಜಪ್ಪನವರ ಮಗ ಶಿವಾನಂದ ಎಂಬುವವರು ತಾವೇ ಮಾಲೀಕರೆಂದು ಹೇಳಿಕೊಂಡು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದು ಪೊಲೀಸರ ಕುಮ್ಮಕ್ಕಿನಿಂದ ರಾತೋರಾತ್ರಿ ಹಂದಿ ಜೋಗಿ ಕುಟುಂಬಸ್ಥರು ವಾಸವಿದ್ದ ಗುಡಿಸಿಲನ್ನು ನೆಲಸಮ ಮಾಡಿದ್ದಾರೆ.
ಹಲವಾರು ವರ್ಷಗಳ ಕಾಲ ಆಶ್ರಯ ನಮ್ಮ ತಾತ ಮುತ್ತಾತ ಹಾಗೂ ನಾವು ಹುಟ್ಟಿ ಬೆಳೆದ ಈ ಜಾಗದಲ್ಲೇ ನಾವು ವಾಸ ಇರಬೇಕೆಂದು ಕುಟುಂಬಗಳು ನಿರ್ಧರಿಸಿವೆ.
7 ದಿನಗಳ ಹಿಂದೆ ಗುಡಿಸಲುಗಳು ತೆರವಾಗಿದ್ದರೂ ವಯೋವೃದ್ಧೆಯೂ ಸೇರಿದಂತೆ ಹೆಂಗಸರು, ಮಕ್ಕಳು ಗಂಡಸರು ಎಂಟು ಮಂದಿ ಕುಟುಂಬಸ್ಥರು ಜಾಗ ಖಾಲಿ ಮಾಡದೆ ರಾತ್ರಿ ಹಗಲೆನ್ನದೆ ಅದೇ ಜಾಗದ ರಸ್ತೆ ಪಕ್ಕದಲ್ಲೆ ಕಾಲ ದೂಡುತ್ತಿದ್ದಾರೆ.
ಈ ಜಾಗದಲ್ಲಿ ನಮಗೆ ಬದುಕಲು ಅವಕಾಶ ನೀಡದಿದ್ದಲ್ಲಿ ಜಮೀನಿನ ಮಾಲೀಕರು ಹಾಗೂ ಪೊಲೀಸರ ಹೆಸರು ಬರೆದಿಟ್ಟು ನಾವೆಲ್ಲರೂ ಇದೇ ಜಾಗದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲೇ ಕಳೆದ ಒಂದು ವಾರದಿಂದ ಇಂತಹ ಬೆಳವಣಿಗೆ ನಡೆದಿದ್ದರೂ ಈ ಕುಟುಂಬದ ನೆರವಿಗೆ ಯಾರೂ ಬಾರದೇ ಇರುವುದು ಸರ್ಕಾರ ಹಾಗೂ ತಾಲೂಕು ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ
ಇದರಿಂದ ಬೇಸತ್ತು ಆತ್ಮಹತ್ಯೆಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಈ ದಲಿತ ಹಂದಿಜೋಗಿ ಕುಟುಂಬಗಳಿಗೆ ಜಿಲ್ಲಾಡಳಿತ ನೆರವಿಗೆ ಬರುವುದೇ ಕಾದು ನೋಡಬೇಕಿದೆ…?

ಇತ್ತೀಚಿನ ಸುದ್ದಿ

ಜಾಹೀರಾತು