5:47 PM Sunday8 - September 2024
ಬ್ರೇಕಿಂಗ್ ನ್ಯೂಸ್
ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್… ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ಗಣೇಶೋತ್ಸವಕ್ಕೆ ಕಾಂಗ್ರೆಸ್‌ ಸರಕಾರ ಯಾವುದೇ ಅಡ್ಡಿ ಮಾಡಿಲ್ಲ; ಶಾಸಕ ಕಾಮತ್ ಸಂಕುಚಿತ ಭಾವನೆಯಿಂದ… ಓವರ್‌ಟೇಕ್ ವಿವಾದ: ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಬೀದಿ ಜಗಳ; ಪ್ರಕರಣ ದಾಖಲು ತೀರ್ಥಹಳ್ಳಿ: ಎದೆ ನೋವು ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕ ರಸ್ತೆಗೆ ಬಿದ್ದು… ಭಾರಿ ಮಳೆ: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ ದಿಢೀರ್ ವಾಹನ ಸಂಚಾರ ಬದಲಾವಣೆಯಿಂದ ಸಾರ್ವಜನಿಕರಿಗೆ ತೊಂದರೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಬಳ್ಳಾರಿಯಲ್ಲಿ ಸೆ.6ರಂದು ಗೋ ಬ್ಯಾಕ್ ಗವರ್ನರ್ ಚಳವಳಿ: ಕಪ್ಪುಪಟ್ಟಿ, ಬಾವುಟ ಪ್ರದರ್ಶನ ರಾಜಕೀಯ ರಣತಂತ್ರಕ್ಕೆ ಮುದುಡಿದ ಕಮಲ: ನಂಜನಗೂಡು ನಗರಸಭೆ ನೂತನ ಸಾರಥಿಗಳಾಗಿ ಕಾಂಗ್ರೆಸ್ ನ… ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ…

ಇತ್ತೀಚಿನ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

09/08/2024, 21:22

ಶ್ರೀರಂಗಪಟ್ಟಣ( reporterkarnataka.com): ರಾಜ್ಯದ ಭ್ರಷ್ಟ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ವಾಸದಿಂದ ನುಡಿದರು.

ಬಿಜೆಪಿ- ಜೆಡಿಎಸ್ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆಯ 6ನೇ ದಿನದ ಸಂದರ್ಭದಲ್ಲಿ ಶ್ರೀರಂಗಪಟ್ಟಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಇಂದು ಅವರು ಮಾತನಾಡಿದರು. ವಾಲ್ಮೀಕಿ ನಿಗಮದ ಹಗರಣ, ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದು ಖಚಿತ ಎಂದು ಸಂತೋಷದಿಂದ ಪಟಾಕಿ ಹೊಡೆಯುತ್ತಿದ್ದಾರೆ; ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಹಾಜರಿರದ ಸಚಿವ ಸಂಪುಟ ಸಭೆ ಮೊನ್ನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದ ಆರೋಪ ಬಂದಿದೆ. ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳ ಲೂಟಿ ಮಾಡಿದ ಆರೋಪ ಅವರ ಮೇಲಿದೆ. ಎರಡೂ ಆರೋಪಗಳಲ್ಲಿ ಸ್ವತಃ ಈ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎ 1 ಆರೋಪಿ ಎಂದು ವಿಶ್ಲೇಷಿಸಿದರು. ಆ ಸಚಿವ ಸಂಪುಟ ಸಭೆಯ ನೇತೃತ್ವವನ್ನು ಭ್ರಷ್ಟಾಚಾರದ ಪಿತಾಮಹರಾದ ಡಿ.ಕೆ.ಶಿವಕುಮಾರ್ ಅವರು ವಹಿಸಿದ್ದರು ಎಂದು ಟೀಕಿಸಿದರು.
ಮುಖ್ಯಮಂತ್ರಿಯವರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡಲಾಗದೆ ಅಧಿವೇಶನವನ್ನು ಮೊಟಕುಗೊಳಿಸಿದ್ದಾರೆ. ವಿರೋಧ ಪಕ್ಷದವರ ನಿಲುವಳಿಗೆ ಉತ್ತರ ಕೊಡಲಾಗದೆ ಓಡಿ ಹೋದ ಅಪಕೀರ್ತಿಗೆ ಪಾತ್ರರಾದವರು ಈ ನಾಡಿನ ದೊರೆ ಸಿದ್ದರಾಮಯ್ಯನವರು ಎಂದು ವಿವರಿಸಿದರು.
ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಅವರಿಗೇ ಮೋಸ ಮಾಡಿ, ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ. ನಮ್ಮ ಪಾದಯಾತ್ರೆ ಸ್ವಾರ್ಥಕ್ಕಲ್ಲ; ನಮ್ಮ ಪಾದಯಾತ್ರೆ ಈ ನಾಡಿನ ದೀನದಲಿತರು, ಪರಿಶಿಷ್ಟ ಜಾತಿ, ಪಂಗಡಗಳಿಗೆ, ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶ ಹೊಂದಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ನಮ್ಮದು ಪ್ರಾಮಾಣಿಕ ಹೋರಾಟ, ಬಡವರ ಪರ ಹೋರಾಟ, ಭ್ರಷ್ಟ ಕಾಂಗ್ರೆಸ್ ಸರಕಾರ, ಭ್ರಷ್ಟ ಸಿಎಂ ವಿರುದ್ಧ ಹೋರಾಟ ನಮ್ಮದು ಎಂದು ತಿಳಿಸಿದರು. ಚಿಕ್ಕಮಗಳೂರು, ಮಧುಗಿರಿ, ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದ ಮಾತ್ರವಲ್ಲದೆ ನೆಲಮಂಗಲ, ಹೊಸಪೇಟೆ, ಶ್ರೀರಂಗಪಟ್ಟಣದಿAದ ದೊಡ್ಡ ಸಂಖ್ಯೆಯಲ್ಲಿ ಬಂದ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದರು.
ಕಾಂಗ್ರೆಸ್ ಸರಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕೋಸ್ಕರ ಆಡಳಿತ ನಡೆಸುತ್ತಿದೆ ಎಂದು ಅವರು ಟೀಕಿಸಿದರು. ಇಂಥ ಭ್ರಷ್ಟ ಸರಕಾರವನ್ನು ಕಿತ್ತೊಗೆಯುವತನಕ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ತಿಳಿಸಿದರು.
ಬಿಜೆಪಿ- ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಹಾಜರಿದ್ದರು.

ರಾಜ್ಯದ ಖಜಾನೆ ದುಡ್ಡು ಲೂಟಿ ಮಾಡಿದವರು ಮೈಸೂರಿಗೆ ಸೇರಿಕೊಂಡಿದ್ದಾರೆ. ರಾಜ್ಯದ ಎಲ್ಲ ಕಡೆ ಸಿದ್ದರಾಮಯ್ಯನವರ ಲೂಟಿ ಗ್ಯಾಂಗ್ ನಿಂತಿದೆ. ಕಾಂಗ್ರೆಸ್ಸಿನ ಕಳ್ಳ- ಮಳ್ಳರನ್ನು ಹಿಡಿಯಲು ನಾವೆಲ್ಲ ಹೋಗುತ್ತಿದ್ದೇವೆ. ಮೈಸೂರು ನೋಡಲೆಂದು ಈ ಪಾದಯಾತ್ರೆ ಅಲ್ಲ.
-ಆರ್.ಅಶೋಕ್, ವಿಧಾನಸಭೆಯ ವಿಪಕ್ಷ ನಾಯಕ

ಡಾ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತೀರಿ. ಕಾಂಗ್ರೆಸ್ಸಿಗರೇ, ಸಂವಿಧಾನ, ಬಾಬಾಸಾಹೇಬ ಡಾ. ಅಂಬೇಡ್ಕರರ ಬಗ್ಗೆ ನಿಮಗೆ ಗೌರವ ಇದೆಯೇ? ರಾಜ್ಯದ ಜನರಿಗೆ ವಿಶ್ವಾಸಘಾತುಕತನ ಮಾಡಿದ ಸಿದ್ದರಾಮಯ್ಯನವರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದರೆ ಇವತ್ತೇ ಕತ್ತಲಾಗುವ ಮೊದಲೇ ರಾಜೀನಾಮೆ ಕೊಡಲಿ.
ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ವಿಪಕ್ಷ ನಾಯಕ

ಕಾಂಗ್ರೆಸ್ಸಿನವರದು ರೈತವಿರೋಧಿ, ಹೈನುಗಾರರ ವಿರೋಧಿ ಸರಕಾರ. ಇದು ಎಲ್ಲ ವಸ್ತುಗಳಿಗೆ ಬೆಲೆ ಹೆಚ್ಚಿಸುವ ಜನವಿರೋಧಿ ಸರಕಾರ. ಇದು ಭ್ರಷ್ಟರ, ಲಂಚಕೋರರ ಸರಕಾರ. ವಾಲ್ಮೀಕಿ ನಿಗಮ ಒಂದು ಉದಾಹರಣೆ ಅಷ್ಟೇ. ಇವರ ಕಾಟಕ್ಕೆ ಅಧಿಕಾರಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಡಾ.ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಉಪ ಮುಖ್ಯಮಂತ್ರಿ

ಪುಣ್ಯ ಜಾಸ್ತಿ ಆದರೆ ಡಿ.ಕೆ.ಶಿವಕುಮಾರ್ ಅವರು ಸ್ವರ್ಗಕ್ಕೆ ಹೋಗಬೇಕಿತ್ತು. ಆದರೆ, ಅರ‍್ಯಾಕೆ ತಿಹಾರ್ ಜೈಲಿಗೆ ಹೋಗಿದ್ದಾರೆ? ಕಾಂಗ್ರೆಸ್ಸಿನವರಿಗೆ ಯಾವ ಪ್ರಮಾಣದ ಪಾಪದ ಕೊಡ ತುಂಬಿದೆ ಎಂದರೆ, ಅಲ್ಪಸಂಖ್ಯಾತರಿಗೂ ಮೋಸ ಮಾಡಿದ್ದೀರಿ; ಹಿಂದುಳಿದ ವರ್ಗಕ್ಕೆ, ದಲಿತರಿಗೂ ಮೋಸ ಮಾಡಿದ್ದೀರಿ. ಅಷ್ಟು ಮಾತ್ರವಲ್ಲ ರೈತರಿಗೂ ಮೋಸ ಮಾಡಿದ್ದೀರಿ. 15 ತಿಂಗಳ ಆಡಳಿತದಲ್ಲಿ 1,400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ

ಇತ್ತೀಚಿನ ಸುದ್ದಿ

ಜಾಹೀರಾತು