10:00 AM Tuesday24 - February 2026
ಬ್ರೇಕಿಂಗ್ ನ್ಯೂಸ್
ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ…

ಇತ್ತೀಚಿನ ಸುದ್ದಿ

ಸಿಎಂ ಬದಲಾವಣೆಯಂತಹ ಅನಾವಶ್ಯಕ ವಿಷಯದ ಕುರಿತು ಚರ್ಚೆ ಸಲ್ಲದು: ಡಿಸಿಎಂ ಲಕ್ಷ್ಮಣ ಸವದಿ

27/05/2021, 14:58

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ರಾಜ್ಯದಲ್ಲಿ ಕೊರೊನಾ ಹಾವಳಿ ದೊಡ್ಡ ಪ್ರಮಾಣದಲ್ಲಿರುವಾಗ ಮುಖ್ಯಮಂತ್ರಿ ಬದಲಾವಣೆಯಂತಹ ಅನಾವಶ್ಯಕ ವಿಷಯದ ಬಗ್ಗೆ ಚರ್ಚೆ ಸಲ್ಲದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಡಕ್ ಆಗಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಸಮೀಪದ ಹತ್ಯಾಳ ಗ್ರಾಮದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರು ಜತೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಲಾದಾಗ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದೇನಿದ್ದರೂ ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ಎಂದರು.

ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಅನಾವಶ್ಯಕ ವಿಷಯದ ಬಗ್ಗೆ ಚರ್ಚೆ ನಡೆಸುವುದು ಸಾರ್ವಜನಿಕ ಜೀವನದಲ್ಲಿರುವವರಿಗೆ ಸಲ್ಲದು ಎಂದು ಅವರು ನುಡಿದರು.

ಯಾತ ನೀರಾವರಿಯಿಂದ ಮುಂಗಾರು ಬೆಳೆಗೆ ತುಂಬಾ ಅನುಕೂಲವಾಗಲಿದೆ. ಜೂನ್ ನಲ್ಲಿ ಆರಂಭಿಸುತ್ತಿದ್ದ ನೀರಾವರಿಗೆ ಈ ಬಾರಿ ಮೇ ತಿಂಗಳಿನಲ್ಲಿ ಚಾಲನೆ ನೀಡಲಾಗಿದೆ ಎಂದು ಮಾಧ್ಯಮ ಜತೆ ಹರ್ಷ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು