ಇತ್ತೀಚಿನ ಸುದ್ದಿ
ಚಿತ್ರೀಕರಣದ ವೇಳೆ ಅವಘಡ: ‘ಕುಸಲ್ದ ಅರಸ’, ನಟ ನವೀನ್ ಪಡೀಲ್ ಗೆ ಗಾಯ; ಆಸ್ಪತ್ರೆಗೆ ದಾಖಲು
21/11/2022, 20:43

ಮಂಗಳೂರು(reporterkarnataka.com): ರಂಗಭೂಮಿ ಕಲಾವಿದ, ಚಿತ್ರನಟ ಕುಸಲ್ದ ಅರಸ ಖ್ಯಾತಿಯ ನವೀನ್ ಡಿ. ಪಡೀಲ್ ಅವರು ಬೆಳ್ತಂಗಡಿ ಸಮೀಪ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದೆ.
ಬೆಳ್ತಂಗಡಿಯ ಮಡಂತ್ಯಾರಿನಲ್ಲಿಚಿತ್ರೀಕರಣ ನಡೆಯುತ್ತಿತ್ತು. ಈ
ಸಂದರ್ಭದಲ್ಲಿ ಅವರು ಬಿದ್ದು ಗಾಯಗೊಂಡಿದ್ದಾರೆ. ನವೀನ್ ಪಡೀಲ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಅವರಿಗೆ 3 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಂಗಭೂಮಿ ಹಾಗೂ ತುಳು ಸಿನಿಮಾಗಳಲ್ಲಿ ನಟ ನವೀನ್ ಡಿ ಪಡೀಲ್ ಹೆಸರು ಚಿರಪರಿಚಿತ. ಇವರಿಗೆ ತುಳು ಇಂಡಸ್ಟ್ರಿಯಲ್ಲಿಸಾಕಷ್ಟು ಜನರು ಅಭಿಮಾನಿ ಬಳಗವಿದೆ. ಕೆಲ ವರ್ಷಗಳ ಹಿಂದೆ ನವೀನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಲವಾರುಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ನವೀನ್ ಪಡೀಲ್ ಅವರು ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ತಮ್ಮಜನರನ್ನು ನಗಿಸುವ ಕೆಲಸ ಮಾಡಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.