10:04 PM Wednesday31 - December 2025
ಬ್ರೇಕಿಂಗ್ ನ್ಯೂಸ್
ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:…

ಇತ್ತೀಚಿನ ಸುದ್ದಿ

ಚಿತ್ರಾಪುರ ದುರ್ಗಾಪರಮೇಶ್ವರಿ ದೇಗುಲ ಆಮಂತ್ರಣ ಪತ್ರಿಕೆ ಬಿಡುಗಡೆ: ಪೇಜಾವರ ಶ್ರೀ, ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿ

08/02/2023, 20:40

ಸುರತ್ಕಲ್(reporterkarnataka.com):
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ಶ್ರೀಪಾದರು ಹಾಗೂ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.

ಶಾಸಕರೂ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಕ್ಷೇತ್ರದಲ್ಲಿ 2 ಕೋಟಿ ರೂ. ಸರಕಾರದ ಅನುದಾನ ಮತ್ತು ಭಕ್ತರು ದಾನಿಗಳ ಅಂದಾಜು 8-10 ಕೋಟಿ ರೂ.ಗಳ ನೆರವಿನಿಂದ ಜೀರ್ಣೋದ್ಧಾರ ಸಮಿತಿ ಮುಂದಾಳತ್ವ , ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಮುಂದೆ 15 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಇದೇ ರೀತಿ ಭಕ್ತರ, ಹಿಂದೂ ಸಂಘಟನೆಗಳ ಮತ್ತು ಮೊಗವೀರ ಸಮಾಜ ಬಾಂಧವರಿಂದ ಸಹಕಾರದಲ್ಲಿ ಯಶಸ್ವಿಯಾಗಿ ನಡೆಯಬೇಕೆಂದರು.


ಕಾರ್ಪೋರೇಟರ್ ಸುಮಿತ್ರಾ ಕರಿಯ, ಪ್ರಮುಖರಾದ ಉಮೇಶ್ ಟಿ. ಕರ್ಕೇರ, ವಿಷ್ಣುಮೂರ್ತಿ ಏಗಳ್, ಲಕ್ಷ್ಮಣ ಅಮೀನ್, ಭರತ್ ಕುಮಾರ್, ಕೇಶವ ಸಾಲಿಯಾನ್, ಗಣೇಶ್ ಹೊಸಬೆಟ್ಟು, ಎನ್. ಆರ್ ಪುರುಷೋತ್ತಮ, ಹೆಚ್ ಎಲ್ ರಾವ್, ದೇವಿಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ, ಸುರೇಶ್, ಕೃಷ್ಣ ಶೆಟ್ಟಿ, ಶ್ರೀಧರ್ ದೇವಾಡಿಗ, ಮೋಹನ್ ಕರ್ಕೇರ, ರೋಹಿದಾಸ್ ಸಾಲಿಯಾನ್, ಚಂದ್ರಶೇಖರ ಎಂಸಿಸಿ, ಓಂದಾಸ್ ಕಾಂಚನ್, ಹರೀಶ್ಚಂದ್ರ ಕರ್ಕೇರ, ದಿನೇಶ್ ಕರ್ಕೇರ, ಆಶಾಕಿರಣ ರೈ, ಪವಿತ್ರ ಕೋಡಿಕೆರೆ, ಶಿವಾಜಿ ದೇವಾಡಿಗ, ನಿಶ್ಚಲ್ ನಿಖಿಲ್, ದಿವಾಕರ್ ಉದ್ಯಾವರ, ಲೀಲಾಧರ ಕೋಡಿಕಲ್, ಚಂದ್ರಹಾಸ್ ಕರ್ಕೇರ, ಗಿರೀಶ್ ಶ್ರೀಯನ್, ಸುಕುಮಾರ್ ದೇವಾಡಿಗ, ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು