ಇತ್ತೀಚಿನ ಸುದ್ದಿ
ಚಿತ್ರನಟಿ ಮಾಲಾಶ್ರೀ ಉಡುಪಿ ಕಾಣಿಯೂರು ಮಠ, ಮಂಗಳೂರಿನ ಕೊರಗಜ್ಜ ಮೂಲಸ್ಥಾನಕ್ಕೆ ಭೇಟಿ
10/08/2023, 10:24
ಉಡುಪಿ(reporterkarnataka.com): ಚಿತ್ರನಟಿ ಮಾಲಾಶ್ರೀ ಅವರು ಉಡುಪಿ ಕಾಣಿಯೂರು ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅವರು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಗಳ ಭೇಟಿಯಾಗಿ ಆಶೀರ್ವಾದ ಸ್ವೀಕರಿಸಿದರು. ಶ್ರೀಗಳು ಫಲ ಮಂತ್ರಾಕ್ಷತೆಯನ್ನು ಕೊಟ್ಟು ಹರಸಿದರು.
ಮಾಲಾಶ್ರೀ ಅವರು ಮಂಗಳೂರಿನ ತೊಕ್ಕೊಟ್ಟು ಬಳಿ ಇರುವ ಶ್ರೀ ಕೊರಗಜ್ಜ ಮೂಲ ಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.