ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮಲೆನಾಡಿನ ರಸ್ತೆ ದುಸ್ಥಿತಿ; ಪಂಚರ್ ಆದ ಆ್ಯಂಬ್ಯುಲೆನ್ಸ್ ನಲ್ಲಿ ನರಳಾಡಿದ ತುಂಬು ಗರ್ಭಿಣಿ
13/02/2023, 18:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡ ರಸ್ತೆ ದುಸ್ಥಿತಿಗೆ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ನಡು ರಸ್ತೆಯಲ್ಲೇ ನರಳಾಡಿದ ದಾರುಣ ಘಟನೆ ಕಳಸ ತಾಲ್ಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.
ಗರ್ಭಿಣಿ ಮಹಿಳೆಯನ್ನು ಕೊಂಡೊಯ್ಯುತ್ತಿದ್ದ ಆ್ಯಂಬ್ಯುಲೆನ್ಸ್ ರಸ್ತೆ ಗುಂಡಿಗೆ ಪಂಚರ್ ಆಗಿ ನಡು ರಸ್ತೆಯಲ್ಲೇ ಕೆಟ್ಟು ನಿಂತಿತು. ಅಂಬ್ಯುಲೆನ್ಸ್ ನಲ್ಲಿ ಇದ್ದ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ನರಳಾಡಲಾರಂಭಿಸಿದರು. ಮಲೆನಾಡ ರಸ್ತೆ ದುಸ್ಥಿತಿಗೆ ಪ್ರಾಣಾಪಾಯದ ಸ್ಥಿತಿಗೆ ಮಹಿಳೆ ತಲುಪಿದ್ದರು. ನಡು ರಸ್ತೆಯಲ್ಲಿ ಪಂಚರ್ ಜೊತೆಗೆ ಇಂಜಿನ್ ನ ದೋಷದಿಂದ ಕೆಟ್ಟು ಆಂಬುಲೆನ್ಸ್ ನಿಂತಿತು. ನಂತರ ಬೇರೊಂದು ವಾಹನದಲ್ಲಿ ಗರ್ಭಿಣಿಯನ್ನ ಕೊಪ್ಪಕ್ಕೆ ಕಳುಹಿಸಲಾಗಿದೆ ಮಾಗುಂಡಿ ಮೂಲದ ಶರಣ್ಯ ಎನ್ನುವ ಮಹಿಳೆಯನ್ನು ಕೊಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಕಳಸ ಟು ಬಾಳೆಹೊನ್ನೂರು ಮಾರ್ಗದ ಹಳುವಳ್ಳಿಯಲ್ಲಿ ಆಂಬುಲೆನ್ಸ್ ನಿಂತಿತು. ಕೊಪ್ಪ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಮಹಿಳೆ ಶರಣ್ಯಜನ್ಮ ನೀಡಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ
ರಸ್ತೆಗಳು ಗುಂಡಿಮಯವಾಗಿದೆ.