ಇತ್ತೀಚಿನ ಸುದ್ದಿ
ಚಿಕ್ಕೋಡಿ: ನಿಯಂತ್ರಣ ತಪ್ಪಿ ಧೂದ್ ಗಂಗಾ ನದಿಗೆ ಬಿದ್ದ ಕಾರು; ಸ್ಥಳೀಯರಿಂದ ಚಾಲಕನ ರಕ್ಷಣೆ
17/07/2022, 16:14
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಧೂದಗಂಗಾ ನದಿಯ ದಾನವಾಡ ದತ್ತವಾಡ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು
ನದಿಗೆ ಬಿದ್ದಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಚಾಲಕ ಹಾಗೂ ಕಾರನ್ನು ಹಗ್ಗದ ಸಹಾಯದಿಂದ ಸ್ಥಳೀಯರು ಹೊರಗೆ ತೆಗೆದರು.
ಮಹಾರಾಷ್ಟ್ರದಿಂದ ಬಾಡಿಗೆ ಆಧಾರದಲ್ಲಿ ಪ್ಯಾಸಿಂಜರ್ಸ್ ಬಿಡಲು ಬಂದಿದ್ದ ಚಾಲಕ ವಾಪಸ್ ತೆರಳುವಾಗ ಈ ದುರ್ಘಟನೆ ನಡೆದಿದೆ.
ಮಹಾರಾಷ್ಟ್ರದ ಪುಣೆಯಿಂದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮಕ್ಕೆ ಕಾರು ಬಂದಿತ್ತು. ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ಚಾಲಕನ ರಕ್ಷಣೆ ಮಾಡಿದರು. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.