ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕೆರೆ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ತಾಯಿ- ಮಗಳು ಸಾವು
20/12/2022, 18:28

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಕೆರೆ ದಾಟುವಾಗ ಮುಳುಗಿ ತಾಯಿ ಮಗಳು ಮುಳುಗಿ ಸಾವಪ್ಪಿದ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪ ನಡೆದಿದೆ.
ಶೋಭಾ (40) ಹಾಗೂ ವರ್ಷಾ(8) ಮೃತ ದುರ್ದೈವಿಗಳು. ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಕೆರೆ ದಾಟುವಾಗ ಮಗಳು ನೀರಿನಲ್ಲಿ ಸಿಲುಕಿದ್ದಾಳೆ. ಆಗ ಮಗಳನ್ನ ರಕ್ಷಿಸಲು ಹೋದ ತಾಯಿಯೂ ಸಾವನ್ನಪ್ಪಿದ್ದಾಳೆ.
ಮೃತ ಶೋಭಾ ಜೊತೆಯಲ್ಲಿದ್ದ ಮಗ ಚೇತನ್ ಪಾರಾಗಿದ್ದಾನೆ.
ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ನೀರಿನ ಪ್ರಮಾಣ ಕಡಿಮೆ ಇರುವ ಕಡೆ ತಾಯಿ, ಮಗಳು ಹಾಗೂ ಮಗ ದಾಟಲು ಯತ್ನಿಸಿದ್ದಾರೆ.
ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ಸಿಲುಕಿಕೊಂಡ ಹಿನ್ನೆಲೆ ರಕ್ಷಣೆಗೆ ತಾಯಿ ತೆರಳಿದ್ದು ಇಬ್ಬರೂ ನೀರು ಪಾಲಾಗಿದ್ದಾರೆ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.