ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮಂಗನಕಾಯಿಲೆಗೆ ಮತ್ತೊಬ್ಬ ಮಹಿಳೆ ಬಲಿ; ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಸಾವು
28/02/2024, 20:17

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ಮಂಗನಕಾಯಿಲೆಗೆ(ಕೆಎಫ್ ಡಿ) ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೊಟ್ರಮ್ಮ (43) ಎಂಬವರು ಮಂಗನಕಾಯಿಲೆಗೆ ಬಲಿಯಾದ ಕಾರ್ಮಿಕ ಮಹಿಳೆ. ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್ ನಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವು ಕಂಡಿದ್ದಾರೆ. ಕಳೆದ ಸೋಮವಾರ ಮಹಿಳೆಯ ರಕ್ತದ ಮಾದರಿಯನ್ನು ವೈದ್ಯರು ಸಂಗ್ರಹಿಸಿದ್ದರು.
ಎಸ್ಟೇಟಿಗೆ ಸೌದೆ ತರಲು ಹೋದಾಗ ಸೋಂಕು ತಗಲಿರುವ ಸಾಧ್ಯತೆಯಿದೆ.
ಕೊಪ್ಪ ಹಾಗೂ ಎನ್.ಆರ್ ಪುರದಲ್ಲಿ ಮತ್ತೆ 6 ಮಂದಿಗೆ ಸೋಂಕು ತಗಲಿದೆ.