ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಕೈಮರ ಚೆಕ್ ಪೋಸ್ಟ್ ಬಳಿ ಶಾಲಾ ಪ್ರವಾಸದ ವಾಹನ ಪಲ್ಟಿ: 5 ಮಂದಿ ಮಕ್ಕಳಿಗೆ ಗಾಯ
21/12/2024, 21:06
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ನಡೆದಿದೆ.
12 ಮಕ್ಕಳಲ್ಲಿ 5 ಮಂದಿ ಮಕ್ಕಳಿಗೆ ಗಾಯಗಳಾಗಿವೆ.
ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು
ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಟ್ರ್ಯಾಕ್ಸ್ ನಲ್ಲಿ ಬಂದಿದ್ದರು.
ಮೈಸೂರಿನಿಂದ ಸರ್ಕಾರಿ ಬಸ್ ನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದ ಮಕ್ಕಳು ಚಿಕ್ಕಮಗಳೂರಿನಲ್ಲಿ ಟ್ರ್ಯಾಕ್ ಗಾಡಿಯನ್ನು ಬಾಡಿಗೆ ಮಾಡಿಕೊಂಡಿದ್ದರು. ಕೈಮರ ಚೆಕ್ ಪೋಸ್ಟ್ ಬಳಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿದೆ. ಮಕ್ಕಳನ್ನ ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಲಾಗಿದೆ.ಮುಳ್ಳಯ್ಯನಗಿರಿಯ ಎತ್ತರದ ಪ್ರದೇಶದಲ್ಲಿ ಘಟನೆಯಾಗಿದ್ರೆ ದೊಡ್ಡ ಅನಾಹುತವಾಗುತ್ತಿತ್ತು.