ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಅಂಗಳದಲ್ಲಿ ಮಲಗಿದ್ದ ವ್ಯಕ್ತಿಯನ್ನು ಎತ್ತಿ ಬಿಸಾಕಿದ ಕಾಡಾನೆ: ಪ್ರಾಣಾಪಾಯದಿಂದ ಪಾರು
12/01/2025, 13:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಣದಲ್ಲಿ ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಕಾಡಾನೆ ಬಿಸಾಡಿದ ಘಟನೆ
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷಿಕ ನಾರಾಯಣ ಗೌಡ ಎಂಬವರನ್ನು ಆನೆ ಎತ್ತಿ ಬಿಸಾಕಿದೆ. ಅವರು ಹುಲ್ಲಿನ ರಾಶಿ ಮೇಲೆ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ.
ನಾರಾಯಣಗೌಡರ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲ್ದೂರು ಸುತ್ತಮುತ್ತ ಒಂಟಿ ಸಲಗದ ಹಾವಳಿ ಮಿತಿ ಮೀರಿದೆ. ಕೂಡಲೇ ಒಂಟಿ ಸಲಗವನ್ನ ಸ್ಥಳಾಂತರಿಸುವಂತೆ ಸ್ಥಳಿಯರ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.