ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ರೈತನ ಸಾವು; ಕಳಸ ಸ್ವಯಂಪ್ರೇರಿತ ಬಂದ್
07/02/2025, 19:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಡುಕೋಣ ದಾಳಿಗೆ ರೈತನ ಸಾವನ್ನಪ್ಪಿರುವುದನ್ನು ಖಂಡಿಸಿ
ಕಳಸ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಾಂಕೇತಿಕ ಬಂದ್ ಆಚರಿಸಲಾಯಿತು.
ಅಂಗಡಿ-ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಮುಚ್ಚಲಾಯಿತು.
ದಕ್ಷಿಣಕಾಶಿ ಕಳಸೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ 2 ಗಂಟೆಗೆ ಬಂದ್ ಕ್ಲೋಸ್ ಮಾಡಲಾಯಿತು.
ಶಾಲಾ-ಕಾಲೇಜು, ಆಟೋ, ಬಸ್ಸು ಯಾವುದಕ್ಕೂ ತೊಂದರೆ ಇರಲಿಲ್ಲ. ಸರ್ಕಾರದ ಗಮನ ಸೆಳೆಯಲು ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಕಾಡಿನ ತಾಲೂಕು ಕಳಸದಲ್ಲಿ ನಿರಂತವಾಗಿ ಕಾಡುಕೋಣಗಳ ದಾಳಿ ನಡೆಯುತ್ತಲೇ ಇರುತ್ತದೆ.
ಕಾಡುಕೋಣ ದಾಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಸ್ಥಳಿಯರ ಆಗ್ರಹಿಸಿದ್ದಾರೆ.
ಸರ್ಕಾರ, ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವಪಕ್ಷ, ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಿತ್ತು.