ಇತ್ತೀಚಿನ ಸುದ್ದಿ
ಚಿಕ್ಕಮಗಳೂರಿನಲ್ಲಿ ಭಾರೀ ವರ್ಷಧಾರೆ: ಮಳೆ ನೀರು ಜತೆ ಸರಕಾರಿ ಆಸ್ಪತ್ರೆಗೆ ನುಗ್ಗಿದ ಡ್ರೈನೇಜ್ ವಾಟರ್; ಗಬ್ಬು ವಾಸನೆ; ರೋಗಿಗಳ ಪರದಾಟ
10/10/2024, 12:23

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ರಾತ್ರಿ ಸುರಿದ ಮಳೆಯಿಂದ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆ ಜಲಾವೃತವಾಗಿದೆ. ಮಳೆ ಜೊತೆ ಸರ್ಕಾರಿ ಆಸ್ಪತ್ರೆಗೆ ಡ್ರೈನೇಜ್ ನೀರು ನುಗ್ಗಿದೆ.
ಸರ್ಕಾರಿ ಆಸ್ಪತ್ರೆ ತುಂಬಾ ಮಳೆ ನೀರು ತುಂಬಿದೆ. ಗ್ರೌಂಡ್ ಫ್ಲೋರ್ ಗೆ ಮಳೆ ಜೊತೆ ಡ್ರೈನೇಜ್ ನೀರು ನುಗ್ಗಿದೆ.
ಆಸ್ಪತ್ರೆಯಲ್ಲಿ ನೀರು ತುಂಬಿದ್ದರಿಂದ ರೋಗಿಗಳ ಪರದಾಟ ನಡೆಸಬೇಕಾಯಿತು.
ಮಳೆ ನೀರು ಜತೆ ಡ್ರೈನೇಜ್ ವಾಟರ್ ಸೇರಿರುವುದರಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ.
ಇಡೀ ರಾತ್ರಿ ಕೆಟ್ಟ ವಾಸನೆ ಮಧ್ಯೆ ಮಳೆ ನೀರಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ಕಾಲ ಕಳೆದರು.
ಒಂದು ಗಂಟೆಯ ಧಾರಾಕಾರ ಮಳೆಗೆ ಸರ್ಕಾರಿ ಆಸ್ಪತ್ರೆ ಜಲಾವೃತವಾಗಿತ್ತು. ಆಸ್ಪತ್ರೆಯ ಕಾರಿಡಾರ್ ನಲ್ಲಿ ಮಳೆ ನೀರು ತುಂಬಿತ್ತು. ಆಸ್ಪತ್ರೆ ತುಂಬಾ ನೀರು ತುಂಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.