ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ
26/11/2021, 18:06
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಚಿಕ್ಕಮಗಳೂರು ನಗರದ ಹೃದಯಭಾಗ ಐ.ಜಿ . ರಸ್ತೆಯಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದ ಘಟನೆ ಶುಕ್ರವಾರ ನಡೆದಿದೆ.
ಪುಂಡರ ಎರಡು ಗುಂಪುಗಳು ಸೌಟು, ಬಾಂಡ್ಲಿ, ಕುರ್ಚಿಯಿಂದ ಪರಸ್ಪರ ಹೊಡೆದಾಡಿಕೊಂಡಿವೆ.ಪೊಲೀಸರ ಭಯವಿಲ್ಲದೇ ರೌಡಿಗಳಂತೆ ಓಡಾಡಿ ದಾಂಧಲೆ ನಡೆಸಿ ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ.ರಸ್ತೆ ಮಧ್ಯೆದಲ್ಲಿ ಪುಂಡರ ಬಡಿದಾಟ ನೋಡಿ ಸಾರ್ವಜನಿಕರು ದಂಗಾಗಿ ಹೋಗಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.