ಇತ್ತೀಚಿನ ಸುದ್ದಿ
Chikkamagaluru | 6500 ರೂ. ಬಿಲ್ ಬಾಕಿ: ಕೊಟ್ಟಿಗೆಹಾರದ ತನಿಖಾ ಠಾಣೆ ವಿದ್ಯುತ್ ಸ್ಥಗಿತ; ಕತ್ತಲಲ್ಲಿ ಸಿಬ್ಬಂದಿಗಳು
30/03/2025, 12:39

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail com
ಮಲೆನಾಡು- ಕರಾವಳಿ ಗಡಿ`ಬಾಗದ ಕೊಟ್ಟಿಗೆಹಾರದಲ್ಲಿರುವ ಅರಣ್ಯ ತನಿಖಾ ಠಾಣೆಯ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಶನಿವಾರ ಸ್ಥಗಿತಿಗೊಳಿಸಿದ್ದು, ಸಿಬ್ಬಂದಿಗಳು ಕತ್ತಲಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ.
ಚಾರ್ಮಾಡಿ ಘಾಟಿಯ ಮೂಲಕ ಎರಡೂ ಜಿಲ್ಲೆಗೆ ರಾತ್ರಿ ಇಡೀ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಎರಡು ಜಿಲ್ಲೆಗೆ ಸಂಬಂಸಿದಂತೆ ಇದು ಅತೀ ಸೂಕ್ಷ್ಮ ತನಿಖಾ ಠಾಣೆಯಾಗಿದೆ. ದಿನದ ೨೪ ಗಂಟೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಈಗ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಕಾರಣ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವುದು ಅಸಾಧ್ಯ
ವಾಗಿರುವುದರ ಜತೆಗೆ ಸಿಸಿಟಿವಿಯೂ ಸಹ ಸ್ಥಗಿತಗೊಂಡಿದೆ.
ಕಳೆದ ಒಂದು ವರ್ಷದ ರೂ. ೬, ೪೦೦ ಬಿಲ್ ಪಾವತಿ ಮಾಡದಿರುವ ಕಾರಣ ಮೆಸ್ಕಾಂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದೆ.