ಇತ್ತೀಚಿನ ಸುದ್ದಿ
Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು ಕಕ್ಕಿದ ನಾಗರ ಹಾವು!
29/03/2025, 10:40

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಉರಗ ತಜ್ಞರು ಬಾಲ ಹಿಡಿದು ಎತ್ತುತ್ತಿದ್ದಂತೆ 10 ಮೊಟ್ಟೆಯನ್ನು ನಾಗರಾಜ ಹೊರಹಾಕಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ನಡೆದಿದೆ.
ಕೊಟ್ಟಿಗೆಗಾರದ ಉಡುಪಿ ವೈಭವ್ ಹೊಟೇಲ್ ಗೆ ನುಗ್ಗಿದ್ದ ನಾಗರಹಾವು ಹೊಟೇಲ್ ನಲ್ಲಿದ್ದ 10 ಮೊಟ್ಟೆಯನ್ನ ನುಂಗಿತ್ತು. ಈ ನಡುವೆ ಹೊಟೇಲ್ ಮಾಲೀಕರು ನಾಗರಹಾವಿಗೆ ಪೂಜೆ ಮಾಡಿ ಕೈಮುಗಿದರು.
ಸ್ನೇಕ್ ಆರೀಫ್ ಅವರು ನಾಗರಹಾವನ್ನು ಸೆರೆ ಹಿಡಿದರು. ಸೆರೆಯಾದ ಬಳಿಕ 10 ಮೊಟ್ಟೆಗಳನ್ನು ಉರಗತಜ್ಞ
ಕಕ್ಕಿಸಿದರು. ನಂತರ ಸ್ನೇಕ್ ಆರೀಫ್ ಅವರು
ನಾಗರಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.