ಇತ್ತೀಚಿನ ಸುದ್ದಿ
Chikkamagaluru | ಪೆಹಲ್ಗಾಮ್ ದಾಳಿ: ಆಲ್ದೂರು ಪಟ್ಟಣ ಬಂದ್; ವ್ಯಾಪಾರ-ವಹಿವಾಟು ಸ್ತಬ್ದ; ವಾರದ ಸಂತೆಯೂ ರದ್ದು
03/05/2025, 10:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪೆಹಲ್ಗಾಮ್ ದಾಳಿ ಹಾಗೂ ಸುಹಾಸ್ ಶೆಟ್ಡಿ ಕೊಲೆ ಖಂಡಿಸಿ ಇಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ ಬಂದ್ ಆಚರಿಸಲಾಯಿತು.
ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದೆ.
ಹಳ್ಳಿಗಳು, ಕೂಲಿ ಕಾರ್ಮಿಕರೇ ಆಲ್ದೂರು ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬೆಳಗ್ಗೆ 7-8 ಗಂಟೆಗೆಲ್ಲಾ ವ್ಯಾಪಾರ-ವಹಿವಾಟು ಆರಂಭಗೊಳ್ಳುತ್ತಿತ್ತು. ಆದರೆ, ಬಂದ್ ಹಿನ್ನೆಲೆ ಆಲ್ದೂರು ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ವಾರದ ಸಂತೆಯನ್ನೂ ರದ್ದು ಮಾಡಿ ಆಲ್ದೂರು ನಿವಾಸಿಗಳು ಬಂದ್ ನಡೆಸಿದರು.