ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ನಗರದಲ್ಲಿ ದಿಢೀರನೆ ಧಾರಾಕಾರ ಮಳೆ: ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು; ಆತಂಕಕ್ಕೀಡಾದ ಜನರು
25/05/2023, 19:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ನಗರದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಮಳೆ ಅಬ್ಬರ ಕಂಡು ನಗರ ನಿವಾಸಿಗಳಲ್ಲಿ ಆತಂಕ್ಕೀಡಾಗಿದ್ದಾರೆ.
ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿದ್ದು, ದಿಢೀರ್ ಆರಂಭವಾದ ಮಳೆಯಿಂದ ಜನಸಾಮಾನ್ಯರ ಅತಂತ್ರಕ್ಕೀಡಾದರು. ಕೊಡೆ ಬಿಟ್ಟು ಬಂದವರು ಮನೆಗಳಿಗೆ ವಾಪಸ್ ಹೋಗಲಾಗದೆ ಪರದಾಡಬೇಕಾಯಿತು.
ಕಳೆದೊಂದು ವಾರದಿಂದ ಮೋಡ ಕಡುಗಟ್ಟುತ್ತಿತ್ತು,ಮಳೆಯಾಗಿರಲಿಲ್ಲ. ಇಂದು ದಿಢೀರನೆ ಆರಂಭವಾದ ಧಾರಾಕಾರ ಮಳೆಗೆ ಜನರು ಕಂಗಾಲಾಗಿದ್ದಾರೆ.